ದೊಡ್ಡ ಹುಣಸೆಮಠಕ್ಕೆ ಸಾಹಿತಿ ಕಲಾವಿದರ ಭೇಟಿ

13 HVR 5
Published on

ಹಾವೇರಿ: ಕಳೆದ ವಾರ ಮಳೆ ಗಾಳಿಗೆ ಸವಣೂರಿನ ದೊಡ್ಡ ಹುಣಸೆಮಠದ ಆವರಣದಲ್ಲಿದ್ದ ಇತಿಹಾಸ ಪ್ರಸಿದ್ಧ ಮಹಾವೃಕ್ಷ ನೆಲಕ್ಕೆ ಉರುಳಿದ ಸ್ಥಳಕ್ಕೆ ಹಾವೇರಿಯ ಸಾಹಿತಿ ಕಲಾವಿದರ ಬಳಗ ಬುಧವಾರ ಭೇಟಿ ನೀಡಿ, ಪರಿಶೀಲಿಸಿತು.
ಮಹಾ ಮರವನ್ನು ಮತ್ತೆ ನೆಟ್ಟು ಬೆಳೆಸಲು ಪ್ರಯತ್ನಿಸುತ್ತಿರುವ ಸಸ್ಯ ಮತ್ತು ಭೂವಿಜ್ಞಾನಿಗಳ ಜತೆಗೆ ಬಳಗ ಚರ್ಚಿಸಿತು. ಶೇ.90ರಷ್ಟು ಈ ಮರ ಮತ್ತೆ ಬೆಳೆಯುತ್ತದೆ ಎಂದು ಧಾರವಾಡ-ಶಿರಸಿ ಕೃಷಿ ವಿಶ್ವಿದ್ಯಾಲಯದ ಪ್ರೊ.ಸೂರ್ಯನಾರಾಯಣ ಭರವಸೆ ನೀಡಿದರು. ಅತ್ಯಂತ ಪುರಾತನ ಮತ್ತು ಸಸ್ಯಲೋಕದ ವಿಸ್ಮಯವಾದ ಮರವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದಾಗಿ ಹಾವೇರಿಯ ಡಿ.ಎಫ್.ಒ ಬಾಲಕೃಷ್ಣ ಹೇಳಿದರು.
ದೊಡ್ಡ ಹುಣಸೆ ಮಠದ ಮಠಾಧೀಶರಾದ ಶ್ರೀ ಚನ್ನಬಸವ ಸ್ವಾಮೀಜಿ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ವಿ.ಎಂ.ಪತ್ರಿ, ಲೇಖಕಿ ಲತಾ ವಾಲಿ, ಚಂದ್ರಶೇಖರ ಮಾಳಗಿ, ಕೆ.ಎನ್ ಜಾನ್ವೇಕರ, ಈರಣ್ಣ ಬೆಳವಡಿ. ಪೃಥ್ವಿರಾಜ ಬೆಟಗೇರಿ, ಸಿ.ಎಚ್ ಬಾರ್ಕಿ, ಎಂ.ಬಿ ಪಾಟೀಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net