ಸವಣೂರಲ್ಲಿ ಬಾಲ ಕಾರ್ಮಿಕನ ರಕ್ಷಣೆ

17 HVR 5
Published on

ಹಾವೇರಿ: ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಂಗವಾಗಿ ಕಾರ್ಮಿಕ ನಿರೀಕ್ಷಕರ ನೇತೃತ್ವದಲ್ಲಿ ಸವಣೂರ ತಾಲೂಕಿನ ವಿವಿಧ ಉದ್ದಿಮೆಗಳಿಗೆ ಶುಕ್ರವಾರ ಭೇಟಿ ನೀಡಿ, ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ತಪಾಸಣೆ ಕಾರ್ಯ ನಡೆಸಿ, ಓರ್ವ ಕಿಶೋರ ಕಾರ್ಮಿಕನನ್ನು ರಕ್ಷಣೆ ಮಾಡಿ, ಪಾಲಕರ ವಶಕ್ಕೆ ನೀಡಲಾಯಿತು.
ಕಾರ್ಯಾಚರಣೆ ಸಂದರ್ಭದಲ್ಲಿ ಕರಪತ್ರ ನೀಡುವ ಮೂಲಕ ಹಾಗೂ ಭಿತ್ತಿಪತ್ರ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಸವಣೂರ ವೃತ್ತ ಕಾರ್ಮಿಕ ನಿರೀಕ್ಷಕ ಮಹಾಂತೇಶ ಹಿರೇಮಠ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಾಘವೇಂದ್ರ ಶಿರೂರ, ಪೊಲೀಸ್ ಇಲಾಖೆಯ ಎಎಸ್‌ಐ ಗೀತಾ ತಿರುಮಲೆ, ಶಿಕ್ಷಣ ಇಲಾಖೆ ವೆಂಕಟೇಶ ಕಳಸದ, ಮಕ್ಕಳ ಸಹಾಯವಾಣಿಯ ಪ್ರವೀಣ ಗೊಡ್ಡೆಮ್ಮಿ, ಬಿ.ಸಿ.ಎಂ. ಇಲಾಖೆ ಡಿ.ಎನ್.ಪೂಜಾರ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net