ಫಲಿತಾಂಶ ಸುಧಾರಣೆಗೆ ‘ವಿದ್ಯಾರ್ಥಿ ಮಿತ್ರ’ ಸಹಕಾರಿ; ಚಳ್ಳಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಕುರುಬರ ಮಲ್ಲೂರ ಗ್ರಾಪಂ ಅಧ್ಯಕ್ಷ ಶ್ರೀಕಾಂತ ದೇವೀಹೊಸೂರ ಹೇಳಿಕೆ

21 Challal School
Published on

ಸವಣೂರ: ಶಾಲಾ ಮಕ್ಕಳ ಫಲಿತಾಂಶ ಸುಧಾರಣೆಯಲ್ಲಿ ವಿಜಯವಾಣಿ ವಿದ್ಯಾರ್ಥಿ, ಉದ್ಯೋಗ ಮಿತ್ರ ದಿನಪತ್ರಿಕೆ ಸಹಕಾರಿಯಾಗಿದ್ದು, ಇದನ್ನು ಓದಿದ ಚಳ್ಳಾಳ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಳೆದ ವರ್ಷ ಉತ್ತಮ ಅಂಕ ಗಳಿಸಿದ್ದಾರೆ ಎಂದು ಕುರುಬರ ಮಲ್ಲೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ದೇವೀಹೊಸೂರ ಹೇಳಿದರು. ಸವಣೂರ ತಾಲೂಕು ಚಳ್ಳಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆ (ಆರ್‌ಎಂಎಸ್‌ಎ)ಯ ಮಕ್ಕಳಿಗೆ ಶನಿವಾರ ವಿಜಯವಾಣಿ ವಿದ್ಯಾರ್ಥಿ, ಉದ್ಯೋಗ ಮಿತ್ರ ವಿತರಿಸಿ ಅವರು ಮಾತನಾಡಿದರು. ಸವಣೂರ ತಾಲೂಕಿನಲ್ಲೇ ಅತಿ ಹೆಚ್ಚು ಫಲಿತಾಂಶ ಪಡೆದ ಸರ್ಕಾರಿ ಶಾಲೆ ಎಂಬ ಗೌರವಕ್ಕೆ ಈ ಶಾಲೆ ಪಾತ್ರವಾಗಿದ್ದು, ಇದಕ್ಕೆ ವಿದ್ಯಾರ್ಥಿ ಮಿತ್ರ ಸಹಕಾರಿಯಾಗಿದೆ ಎಂದರು. ಪ್ರೌಢಶಾಲೆ ಮುಖ್ಯೋಪಾಧ್ಯಾಯೆ ಜಿ.ಕೆ ಜವಳಿ ಮಾತನಾಡಿ, ಶಾಲಾ ಮಕ್ಕಳ ಸರ್ವತೋಮುಖ ಬೆಳವಣಿಗೆ ಕುರಿತು ನಮ್ಮ ಶಾಲೆ ಸದಾ ಪ್ರಯತ್ನಿಸುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಜ್ಞಾನ ಹೆಚ್ಚಿಸುವ ಕೆಲಸವನ್ನು ವಿದ್ಯಾರ್ಥಿ ಮಿತ್ರ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಸಮಾರಂಭದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹೇಶ ಬಚ್ಚಪ್ಪಗೌಡ್ರ, ಕುರುಬರ ಮಲ್ಲೂರ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಎನ್ ಮಲ್ಲಾಡದ, ಅನಿಲಕುಮಾರ ಹೊಂಬಳದ, ನವೀನ ಸವಣೂರ, ಗ್ರಾಮದ ಹಿರಿಯರಾದ ಕನಕದಾಸ ನಾಯಕ, ಮಲ್ಲನಗೌಡ ದೊಡ್ಡಗೌಡ್ರ, ಸುರೇಶ ಕಳ್ಳಿಮನಿ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯೆ ಶಿಕ್ಷಕ ಆರ್.ಎಂ ಪೀರಜಾದೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ ಬುಶೆಟ್ಟಿ, ಗ್ರಾಪಂ ಸಿಬ್ಬಂದಿ ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net