ಸವಣೂರ: ತಾಲೂಕಿನ ಚಳ್ಳಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಶೇ.87.87ರಷ್ಟಾಗಿದೆ.
ಚೈತ್ರಾ ಕಲಿವಾಳ (606 ಅಂಕ) ಪ್ರಥಮ ಸ್ಥಾನ, ಸ್ನೇಹಾ ಗುಳೇದ (595 ಅಂಕ) ದ್ವಿತೀಯ ಸ್ಥಾನ, ಪ್ರಿಯದರ್ಶಿನಿ ಅಂಗಡಿ (579 ಅಂಕ) ತೃತೀಯ ಸ್ಥಾನ ಹಾಗೂ ಜ್ಯೋತಿ ಅಜ್ಜಣ್ಣನವರ, ನೀಲಮ್ಮ ಬಚ್ಚಪ್ಪಗೌಡ್ರ ನಾಲ್ಕು, ಐದನೇ ಸ್ಥಾನ ಪಡೆದಿದ್ದಾರೆ. ಮಕ್ಕಳ ಸಾಧನೆಗೆ ಗ್ರಾಮದ ಹಿರಿಯರು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಮತ್ತು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕೈಹಿಡಿದ ವಿದ್ಯಾರ್ಥಿ ಮಿತ್ರ ಓದು
ಹತ್ತನೇ ತರಗತಿ ವಿದ್ಯಾರ್ಥಿಗಳು ವರ್ಷಪೂರ್ತಿ ವಿಜಯವಾಣಿ ವಿದ್ಯಾರ್ಥಿ ಮಿತ್ರ ಓದಿದ್ದರು. ಇದು ಹೆಚ್ಚು ಅಂಕ ಗಳಿಸಲು ಸಹಕಾರಿಯಾಯಿತು ಎಂದು ವಿದ್ಯಾರ್ಥಿಗಳು, ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.