ಬಿಗ್ ಬಾಸ್ ವಿನ್ನರ್ ಹನುಮಂತನಿಗೆ ತವರೂರಲ್ಲಿ ಅದ್ದೂರಿ ಸ್ವಾಗತ

30 Big boss Hanumantu
Published on

ಹಾವೇರಿ: ಬಿಗ್ ಬಾಸ್ ಸೀಸನ್ 11ರ ವಿಜೇತ ಸವಣೂರ ತಾಲೂಕಿನ ಚಿಲ್ಲೂರ ಬಡ್ನಿಯ ಹನುಮಂತ ಲಮಾಣಿಗೆ ತವರಿನಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.

ಮೂರು ತಿಂಗಳ ಬಳಿಕ ತವರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಭರಮದೇವರ ವೃತ್ತದಲ್ಲಿ ನೂರಾರು ಸಂಖ್ಯೆಯ ಅಭಿಮಾನಿಗಳು ಸಂಭ್ರಮದಿಂದ ಹನುಮಂತನನ್ನು ಸ್ವಾಗತಿಸಿದರು.

ಶಾಲು, ಹೂವಿನ ಹಾರ ಹಾಕಿ ಸ್ವಾಗತಿಸಿದರು. ನಂತರ ಹನುಮಂತ ಹಾಡಿದ ಡಿಜೆ ಹಾಡಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಹನುಮಂತ ಬಿಗ್ ಬಾಸ್ ಟ್ರೋಪಿ ಪ್ರದರ್ಶಿಸಿ ಖುಷಿಪಟ್ಟರು.

ಈ ವೇಳೆ ಅಭಿಮಾನಿಗಳು ಹನುಮಂತ ಹಾಡಿರುವ ಲಂಬಾಣಿ ಹಾಗೂ ಜಾನಪದ ಡಿಜೆ ಹಾಡುಗಳಿಗೆ ನೃತ್ಯ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net