ಹಾವೇರಿ: ತುರ್ತು ಪರಿಸ್ಥಿತಿಗಳಲ್ಲಿ ಜನ ಸಾಮಾನ್ಯರ ನೆರವಿಗೆ ನಿಂತ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ ಜನ್ಮದಿನದ ಪ್ರಯುಕ್ತ ಸಂಜೀವಿನಿ ಜೀವರಕ್ಷಕ ಟ್ರಸ್ಟ್ ವತಿಯಿಂದ ಫೆ.27ರಂದು ನಗರದ ಪ್ರವಾಸಿ ಮಂದಿರದಲ್ಲಿ ಆಪತ್ ರಕ್ಷಕರ ದಿನಾಚರಣೆ ಆಚರಿಸಲಾಗುವುದು ಎಂದು ಟ್ರಸ್ಟ್‌ನ ಜಿಲ್ಲಾಧ್ಯಕ್ಷ ಆನಂದ ಬೆಂಡಿಗೇರಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೀವಿನಿ ಜೀವರಕ್ಷಕ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಚಿವ ಸಂತೋಷ ಲಾಡ್ ಓಡಿಶಾ ರೈಲು ದುರಂತ, ಕೇರಳದ ಗುಡ್ಡ ಕುಸಿತ, ಕೇದಾರನಾಥದಲ್ಲಿ ಪ್ರವಾಹ ಹೀಗೆ ಹಲವಾರು ಬಾರಿ ನಡೆದ ಅಪಘಾತದ ತುರ್ತು ಪರಿಸ್ಥಿತಿಗಳಲ್ಲಿ ಸಾಮಾನ್ಯ ಜನರ ನೆರವಿಗೆ ನಿಂತು ಜನರ ಜೀವ ರಕ್ಷಣೆ ಮಾಡಿದ್ದಾರೆ. ಹಾಗಾಗಿ ಅವರ ಜನ್ಮದಿನದಂದು ಟ್ರಸ್ಟ್ ವತಿಯಿಂದ ಜಿಲ್ಲೆಯ 15 ಜನರಿಗೆ ಸಂಜೀವಿನಿ ಜೀವ ರಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಜಯಗಾಂಧೀ ಸಂಜೀವಣ್ಣನವರ, ಸುರೇಶ ಹಳ್ಳಳ್ಳಿ, ಜಮೀರ್ ಜಿಗರಿ, ನೂರಅಹ್ಮದ್ ಕರ್ಜಗಿ, ಮಲ್ಲಿಕ್ ಬಾಣಿ, ಶಬ್ಬೀರ್‌ಸಾಬ, ಮೋದಿನಸಾಬ ರಾಮಾಪುರ, ಸಾಕ್ ಯಾದವಾಡ, ಮರಿಯಪ್ಪ ಮಣ್ಣಮ್ಮನವರ, ಇತರರಿದ್ದರು.