

ಹಾವೇರಿ: ತಾಲೂಕಿನ ಸಂಗೂರ ಗ್ರಾಮದಲ್ಲಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಅಂಗವಾಗಿ ಸ್ವಾಮೀಜಿಯವರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಮಧ್ಯಾಹ್ನ ಅನ್ನದಾಸೋಹ ಕಾರ್ಯಕ್ರಮ ಜರುಗಿತು. ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ಡಾ.ಶಿವಕುಮಾರ ಮಾಳಗಿ, ಹೊನ್ನಪ್ಪ ಕುಂದೂರು, ನಾಗಪ್ಪ ಹೊಸೂರ, ಪ್ರಕಾಶ ಕುಳೇನೂರ, ಮಾಲತೇಶ ಪೂಜಾರ, ಸಿದ್ದಪ್ಪ ವರದಿ, ಕುಮಾರ ಬೆಳವಿಗಿ, ರುದ್ರಪ್ಪ ಸೋಮಕ್ಕನವರ, ವಿರುಪಾಕ್ಷಪ್ಪ ಕಂಡಿಮನಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.