ಕಲ್ಯಾಣ ಕ್ರಾಂತಿಗೆ ಕಾರಣೀಕರ್ತರು ಸಮಗಾರ ಹರಳಯ್ಯ; ಸಮಗಾರ ಹರಳಯ್ಯ (ಚಮ್ಮಾರ) ಸಂಘದ ಅಧ್ಯಕ್ಷ ಜಗದೀಶ ಬೆಟಗೇರಿ

5 HVR 11
Published on

ಹಾವೇರಿ: ಹನ್ನೆರಡನೇ ಶತಮಾನದಲ್ಲಿ ಜಾತಿ ಭೂತವನ್ನು ತೊಲಗಿಸಬೇಕೆಂದು ನಿರ್ಧರಿಸಿದ್ದ ಬಸವಣ್ಣನವರು ಸಮಗಾರ ಹರಳಯ್ಯನ ಮಗ ಶೀಲವಂತ ಹಾಗೂ ಬ್ರಾಹ್ಮಣ ಮಧುವರಸನ ಮಗಳು ಲಾವಣ್ಯವತಿಯ ವಿವಾಹವನ್ನು ನೆರವೇರಿಸುತ್ತಾರೆ. ಇದನ್ನು ಸಹಿಸದ ಸಂಪ್ರದಾಯವಾದಿಗಳು ಶರಣರ ಮೇಲೆ ದೌರ್ಜನ್ಯ ನಡೆಸುತ್ತಾರೆ. ಆಗ ಕಲ್ಯಾಣ ಕ್ರಾಂತಿ ನಡೆಯಿತು ಎಂದು ಸಮಗಾರ ಹರಳಯ್ಯ (ಚಮ್ಮಾರ) ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಗದೀಶ ಬೆಟಗೇರಿ ಹೇಳಿದರು.

ನಗರದಲ್ಲಿ ಇತ್ತೀಚೆಗೆ ಸಮಗಾರ ಹರಳಯ್ಯ (ಚಮ್ಮಾರ) ಸಂಘದಿಂದ ಆಯೋಜಿಸಿದ್ದ ವಿಶ್ವಗುರು ಬಸವೇಶ್ವರ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. ಕಲ್ಯಾಣ ಕ್ರಾಂತಿ ನಡೆಯಲು ಪ್ರಮುಖ ಕಾರಣೀಕರ್ತರು ಸಮಗಾರ ಹರಳಯ್ಯನವರು. ಸಮಕಾಲಿನ ಶರಣರಲ್ಲಿ ಗುರುತಿಸಿಕೊಂಡ ಹರಳಯ್ಯನವರ ಆದರ್ಶ ಭಕ್ತಿ ಇಂದಿನ ಯುವ ಪೀಳಿಗೆಯಲ್ಲಿ ಮೂಡಿಸಿಬೇಕು. ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರಿಗೆ ಉತ್ತಮ ಸಂಸ್ಕಾರ ನೀಡಬೇಕೆಂದರು.

ಪತ್ರಕರ್ತ ಮಾಲತೇಶ ಅಂಗೂರ, ಮಾದೇವಪ್ಪ ವಾಳದ ಹಾಗೂ ಉತ್ತಪ್ಪ ತೇರದಾಳ ಮಾತನಾಡಿದರು. ಶ್ರೀದೇವಿ ತೇರದಾಳ ಅವರನ್ನು ಸನ್ಮಾನಿಸಲಾಯಿತು.

ಲಲಿತಮ್ಮ ಹಂಜಗಿ, ಬಸವರಾಜ ಸಾತಪತಿ, ರೂಪೇಶ ಬಳ್ಳಾರಿ, ಪರಶುರಾಮ ಬಾತಗಾವಿ, ಮಂಜುನಾಥ ರಾಯಭಾಗ, ಸುನೀಲ ಬೆಟಗೇರಿ, ದೇವೇಂದ್ರಪ್ಪ ಅರಕೇರಿ, ಇತರರಿದ್ದರು.

ಭೂಮಿಕಾ, ಸಂಜನಾ ಬೆಟಿಗೇರಿ ಪ್ರಾರ್ಥಿಸಿದರು. ಧರ್ಮರಾಜ ದೊಡ್ಡಮನಿ ಸ್ವಾಗತಿಸಿದರು. ಪೃಥ್ವಿರಾಜ ಬೆಟಿಗೇರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net