

ಹಾವೇರಿ: ಇಲ್ಲಿನ ಅಶ್ವಿನಿ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಡಿ.15ರಂದು ಕೂಡಲ ಗುರುನಂಜೇಶ್ವರ ಮಠದ ಶ್ರೀ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ದತ್ತಾತ್ರೇಯ ಜಯಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 7 ಗಂಟೆಗೆ ಶಿರಡಿ ಸಾಯಿಬಾಬಾರಿಗೆ ಕ್ಷೀರಾಭಿಷೇಕ, ಬೆಳಗ್ಗೆ 8.30ಕ್ಕೆ ಶ್ರೀ ಗುರು ದತ್ತಾತ್ರೇಯರ ಪಾದುಕೆ ಪೂಜೆ ಹಾಗೂ ಸತ್ಯನಾರಾಯರಣ ಪೂಜೆ, ಬೆಳಗ್ಗೆ 10ರಿಂದ ಗಣ ಹೋಮ, ದತ್ತ ಹೋಮ, ಪೂರ್ಣಾಹುತಿ ನೆರವೇರಲಿದೆ.
ಮಧ್ಯಾಹ್ನ 12ಕ್ಕೆ ವಿಶೇಷ ಮಂಗಳಾರತಿ ನಂತರ ಪ್ರಸಾದ ವಿತರಣೆ ಮಾಡಲಾಗುವುದು. ಸಂಜೆ 4ಕ್ಕೆ ಶ್ರೀಸಾಯಿ ಭಜನಾ ಮಂಡಳಿಯಿಂದ ಸಚ್ಛರಿತ್ರೆ ಪಾರಾಯಣ, ಸಂಜೆ 5ಕ್ಕೆ ಭಜನೆ ನಂತರ ಸಾಮೂಹಿಕ ಅಗ್ನಿಹೋತ್ರ ನಡೆಯಲಿದೆ. ಸಂಜೆ 6.30ಕ್ಕೆ ಧೂಪಾರತಿ, ಪಾಲಕಿ ಸೇವೆ ನಡೆಯಲಿದೆ ಎಂದು ಶ್ರೀ ಸಾಯಿಬಾಬಾ ಸೇವಾ ಸಮಿತಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.