

ಹಾವೇರಿ: ಇಲ್ಲಿನ ಅಶ್ವಿನಿ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಜು.21ರಂದು ಗುರುಪೂರ್ಣಿಮ ಮಹೋತ್ಸವ ಜರುಗಲಿದೆ.
ಬೆಳಗ್ಗೆ 6.15ಕ್ಕೆ ಕಾಕಡಾರತಿ, ಬೆಳಗ್ಗೆ 7.15ರಿಂದ 10.30ರವರೆಗೆ ಭಕ್ತರಿಂದ ಸಾಯಿಬಾಬಾರಿಗೆ ಕ್ಷೀರಾಭಿಷೇಕ, ಬೆಳಗ್ಗೆ 10.30ರಿಂದ 11.45ರವರೆಗೆ ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ 12 ಗಂಟೆಗೆ ನೈಮೇದ್ಯಾರತಿ ಹಾಗೂ ಪ್ರಸಾದ ವಿತರಣೆ, ಸಂಜೆ 4 ಗಂಟೆಗೆ ಭಜನೆ, 6.30ಕ್ಕೆ ಧೂಪದಾರತಿ, ಪಾಲಕಿ ಉತ್ಸವ ನೆರವೇರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶ್ರೀ ಸಾಯಿಬಾಬಾ ಸೇವಾ ಸಮಿತಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಜೆ ಭಕ್ತಿ ಸುಧೆ
ಶ್ರೀ ಸಾಯಿ ಸಾಂಸ್ಕೃತಿಕ ಕಲಾ ಸಂಸ್ಥೆಯ ಕಲಾವಿದರಿಂದ ಜು.21ರಂದು ಸಂಜೆ 7 ಗಂಟೆಗೆ ದೇಗುಲದ ಆವರಣದಲ್ಲಿ ಭಕ್ತಿಗೀತೆಗಳ ಗಾಯನ ‘ಭಕ್ತಿಸುಧೆ’ ಕಾರ್ಯಕ್ರಮ ನಡೆಯಲಿದೆ.