ಇಬ್ಬರು ಮನೆಗಳ್ಳರು ಅಂದರ್; 2 ಲಕ್ಷ ರೂ. ಮೌಲ್ಯದ ಚಿನ್ನ, ಬೈಕ್ ಜಪ್ತಿ

16 HVR 8
Published on

ಹಾವೇರಿ: ತಾಲೂಕಿನ ಗೌರಾಪುರ ಗ್ರಾಮದ ಮನೆಯೊಂದರ ಕೀಲಿ ಮುರಿದು ಕಳ್ಳತನ ಮಾಡಿದ್ದ ಪ್ರಕರಣದ ಇಬ್ಬರು ಆರೋಪಿತರನ್ನು ಗ್ರಾಮೀಣ ಠಾಣೆ ಪೊಲೀಸು ಶುಕ್ರವಾರ ಬಂಧಿಸಿದ್ದಾರೆ. ಅವರಿಂದ 2 ಲಕ್ಷ ರೂ. ಮೌಲ್ಯದ ಚಿನ್ನ, ಬೈಕ್ ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ದೇವರಾಜ ನಗರದ ನವೀದ್ ಅಲಿ ಮೈನುದ್ದೀನ್ ಹಾಗೂ ದಾವಣಗೆರೆ ನಿಟವಳ್ಳಿಯ ರಮೇಶ ಉದಯಪ್ಪ ಬಂಧಿತರು.
ಡಿ.8ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 2.30ರ ನಡುವೆ ಗೌರಾಪುರ ಗ್ರಾಮದ ಹೊನ್ನಪ್ಪ ಕರಿಯಣ್ಣನವರ ಮನೆ ಕೀಲಿ ಹಾಕಿಕೊಂಡು ಬೇರೆಡೆ ತೆರಳಿದ್ದರು. ಈ ವೇಳೆ ಕೀಲಿ ಮುರಿದು ಟ್ರಜರಿಯಲ್ಲಿದ್ದ 4.06 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರ, ನೆಕ್ಲೆಸ್, ಇತರ ಚಿನ್ನ, ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗ್ರಾಮೀಣ ಠಾಣೆ ಸಿಪಿಐ ಸಿದ್ಧಾರೂಢ ಬಡಿಗೇರ ನೇತೃತ್ವದ ತಂಡ ಆರೋಪಿಗಳನ್ನು ಬೇಧಿಸಿದೆ. ಪಿಎಸ್‌ಐಗಳಾದ ರವಿಕುಮಾರ ಡಿ., ಎಸ್.ಪಿ.ಹೊಸಮನಿ, ಶಿವಕುಮಾರ ಟಿ., ಸಿಬ್ಬಂದಿ ಬಿ.ಎಂ.ರಾಜೇಸಾಬನವರ, ಯಲ್ಲಪ್ಪ ತಹಶೀಲ್ದಾರ್, ಎಂ.ಕೆ.ನದಾಫ, ಸುರೇಶ ನಾಯಕ, ಎಂ.ಎಂ.ತುಂಗಳ, ಸುರೇಂದ್ರ ಸವದಿ, ಮಂಜು ಮೂಖಿ, ಎಸ್.ಎಂ.ಯತ್ತಿನಹಳ್ಳಿ, ಗಿರೀಶ ಕಡೆಮನಿ, ಕಿರಣ ಕೆ., ಮಾರುತಿ ಹಾಲಬಾವಿ, ಸತೀಶ ಮಾರಕಟ್ಟಿ ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net