ಶಾಸಕರು ಅಧಿವೇಶನ ಸರಿಯಾಗಿ ಬಳಸಿಕೊಳ್ಳಬೇಕು; ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಕಿವಿಮಾತು

Rudrappa Lamani
Published on

ಹಾವೇರಿ: ಬೆಳಗಾವಿಯಲ್ಲಿ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಶಾಸಕರು ಸಮಯಕ್ಕೆ ಸರಿಯಾಗಿ ಭಾಗವಹಿಸುವ ಮೂಲಕ ಅಧಿವೇಶನವನ್ನು ಸರಿಯಾಗಿ ಬಳಸಿಕೊಳ್ಳಬೇಕು. ತಮ್ಮ ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚಿಸಬೇಕು, ಚಿಂತನೆ ಮಾಡಬೇಕು ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಕಿವಿಮಾತು ಹೇಳಿದರು.
ಹತ್ತು ದಿನಗಳ ಕಾಲ ನಿರಂತರವಾಗಿ ಸಿದ್ದರಾಮಯ್ಯ ಸರ್ಕಾರದಿಂದ ಚರ್ಚೆ ನಡೆಯಲಿದೆ. ಪ್ರತಿಭಟನೆ ಮಾಡುವುದನ್ನು ಬಿಡಬೇಕು. ಚರ್ಚೆಗೆ ಅವಕಾಶವಿದೆ. ಕಲಾಪ ಸರಿಯಾಗಿ ನಡೆಯಲು ಸಹಕರಿಸಿ ಎಂದು ಹೇಳಿದರು.
ಬೆಳಗಾವಿಯ ಸುವರ್ಣ ಸೌಧಕ್ಕೆ ವಿವಿಧ ಇಲಾಖೆಗಳ ವರ್ಗಾವಣೆ ವಿಚಾರದ ಕುರಿತು ನಮ್ಮ ಸರ್ಕಾರ ತೀರ್ಮಾನಿಸಲಿದೆ. ಮುಂದೆ ಏನಾಗುತ್ತದೆ ನೋಡೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net