ರೋಟರಿ ಕ್ಲಬ್‌ನಿಂದ ಪತ್ರಿಕಾ ವಿತರಕರಿಗೆ ರೇನ್ ಕೋಟ್ ವಿತರಣೆ

4 HVR 4
Published on

ಹಾವೇರಿ: ಹಾವೇರಿ ರೋಟರಿ ಸಂಸ್ಥೆ ವತಿಯಿಂದ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ 52 ಪತ್ರಿಕಾ ವಿತರಕರಿಗೆ ರೇನ್ ಕೋಟ್ ವಿತರಿಸಲಾಯಿತು.
ಕ್ಲಬ್ ಅಧ್ಯಕ್ಷ ಸುಜಿತಕುಮಾರ ಜೈನ್ ಮಾತನಾಡಿ, ಸಮಾಜದ ಒಳಿತಿಗಾಗಿ ದುಡಿಯುವ ಪತ್ರಿಕೆಗಳನ್ನು ಮಳೆ, ಗಾಳಿ, ಚಳಿ ಲೆಕ್ಕಿಸದೇ ಪತ್ರಿಕೆ ವಿತರಿಸುವ ಪತ್ರಿಕಾ ವಿತರಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಶ್ರಮಜೀವಿಗಳಿಗೆ ರೇನ್ ಕೋಟ್ ಕೊಡುವ ಕಾರ್ಯ ಖುಷಿ ಕೊಟ್ಟಿದೆ ಎಂದರು.
ರೋ.ಅಜಿತ ಮಾಗಾವಿ ಮಾತನಾಡಿ, ರೋಟರಿ ಸಂಸ್ಥೆ ಸಮಾಜದಲ್ಲಿನ ವಿವಿಧ ಕ್ಷೇತ್ರಗಳಲ್ಲಿನ ಶ್ರಮಜೀವಿಗಳನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ಮಾಡುತ್ತದೆ ಎಂದರು.
ಮಲ್ಲಿಕಾರ್ಜುನ ಕೋಟೂರ, ರಮೇಶ ಬಳ್ಳಾರಿ, ರಾಜು ಲಿಗಾಡೆ, ಜಗದೀಶ ಬಸೇಗೆಣ್ಣಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಎಸ್.ಸಿ.ಹಿರೇಮಠ, ಎಸ್.ಎ.ವಜ್ರಕುಮಾರ, ಪತ್ರಿಕಾ ವಿತರಕರ ಸಂಘದ ತಾಲೂಕು ಅಧ್ಯಕ್ಷ ಕರಬಸಪ್ಪ ಹಳದೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net