ಹಾವೇರಿ ರೋಟರಿ ಕ್ಲಬ್ ಅಧ್ಯಕ್ಷರ ಪದಗ್ರಹಣ

18 HVR 9
Published on

ಹಾವೇರಿ: ನಗರದ ರಜನಿ ಸಭಾಂಗಣದಲ್ಲಿ ಇತ್ತೀಚೆಗೆ ರೋಟರಿ, ಇನ್ನರ್‌ವ್ಹೀಲ್ ಹಾಗೂ ರೋಟ್ರಾಕ್ಸ್ ಸಂಸ್ಥೆಗಳ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಜರುಗಿತು.

2025-26ನೇ ಸಾಲಿನ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಕಾಶೀನಾಥ ಅರವತ್ ಹಾಗೂ ಕಾರ್ಯದರ್ಶಿಯಾಗಿ ಡಾ.ಪ್ರದೀಪ ದೊಡ್ಡಗೌಡರ ಅಧಿಕಾರ ಸ್ವೀಕರಿಸಿದರು. ರೋಟರಿ ಸಂಸ್ಥೆಯ ಡಿಜಿನ್ ಅಶೋಕ ನಾಯಕ ಅಧಿಕಾರ ಹಸ್ತಾಂತರಿಸಿದರು.

ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆಯಾಗಿ ವನಿತಾ ಮಗನೂರ ಹಾಗೂ ಕಾರ್ಯದರ್ಶಿಯಾಗಿ ಶೋಭಾ ತಾಂಡೂರ ಆಯ್ಕೆಯಾದರು. ಇವರಿಗೆ ವಿರಾಜ್ ಕೋಟಕ್ ಅಧಿಕಾರ ಹಸ್ತಾಂತರಿಸಿದರು. ರೋಟ್ರಾಕ್ಟ್ ಸಂಸ್ಥೆಯ ಅಧ್ಯಕ್ಷರಾಗಿ ಶಿವಕುಮಾರಗೌಡ ವಿ. ಗೌಡರ ಹಾಗೂ ಕಾರ್ಯದರ್ಶಿಯಾಗಿ ರತನ ಕಾಶಪ್ಪನವರ ಆಯ್ಕೆಯಾದರು. ಇವರಿಗೆ ದಯಾನಂದ ಯಡ್ರಾಮಿ ಅಧಿಕಾರ ಹಸ್ತಾಂತರ ಮಾಡಿದರು.

ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಮಲ್ಲಿಕಾರ್ಜುನ ಹಂದ್ರಾಳ ಹಾಗೂ ಕಾರ್ಯದರ್ಶಿ ರಾಜು ಲಿಗಾಡೆ ಹಾಗೂ ರೋಟರಿ, ಇನ್ನರ್ ವ್ಹೀಲ್, ರೋಟ್ರಾಕ್ಟ್ ಸದಸ್ಯರು ಹಾಗೂ ವಿವಿಧ ಸಂಘ- ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net