ನಿವೃತ್ತ ನೌಕರರ ವೇತನ ತಾರತಮ್ಯ ಸರಿಪಡಿಸಿ

Published on

ಹಾವೇರಿ: 7ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ತಾರತಮ್ಯವಾಗಿದ್ದು, ಅದನ್ನು ಸರಿಪಡಿಸಬೇಕು ಎಂದು ಜಿಲ್ಲಾ ನಿವೃತ್ತ ನೌಕರರ ಸಂಘದಿಂದ ಇತ್ತೀಚೆಗೆ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜುಲೈ 22ರಿಂದ ಜುಲೈ 24ರ ಅವಧಿಯಲ್ಲಿ ವೇತನದಲ್ಲಿ ವ್ಯತ್ಯಾಸವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೆ.ಎಫ್.ಪಾಟೀಲ, ಎಂ.ಎಫ್.ಬಡಿಗೇರ, ಕೆ.ವಿ.ಪಿಡ್ಡಿ, ವಿ.ಆರ್.ಕಿತ್ತೂರಮಠ, ಎಸ್.ಎಂ.ಮಲ್ಲಪ್ಪನವರ, ಎನ್.ಬಿ.ಕಾಳೆ, ಆರ್.ಡಿ.ಹೊಂಬರಡಿ, ಎಸ್.ಎಚ್.ಬಣಕಾರ, ಆರ್.ಬಿ.ಸೊರಟೂರ, ಎಸ್.ಬಿ.ಕಟಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net