ರಟ್ಟಿಹಳ್ಳಿ; ಚಿರತೆ ದಾಳಿಯಿಂದ ರೈತ ಮೃತ

11 Cheeta Attack 3
Published on

ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಕಣವಿ ಸಿದ್ದಗೇರಿ ಗ್ರಾಮದ ಬಳಿ ರಾತ್ರಿ ಹೊಲಕ್ಕೆ ನೀರು ಹಾಯಿಸಲು ಮುಂದಾಗಿದ್ದ ರೈತ ಚಿರತೆ ದಾಳಿಯಿಂದ ಮೃತಪಟ್ಟಿದ್ದಾರೆ.

ಗ್ರಾಮದ ಬೀರಪ್ಪ ಹನುಮಂತಪ್ಪ ಬಳಗಾವಿ ಮೃತಪಟ್ಟ ಯುವರೈತ.

ಸಹೋದರ ಗಣೇಶ ಜತೆಗೆ ಬೀರಪ್ಪ ರಾತ್ರಿ 11.50ರ ಸುಮಾರಿಗೆ ಹೊಲಕ್ಕೆ ನೀರು ಹಾಯಿಸಲು ಹೋಗಿದ್ದರು.

ಈ ವೇಳೆ ಏಕಾಏಕಿ ಚಿರತೆ ಇಬ್ಬರ ಮೇಲೆ ಎರಗಿದೆ. ಬೀರಪ್ಪನ ಮೇಲೆ ಗಂಭೀರವಾಗಿ ಗಾಯ ಮಾಡಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಗಣೇಶನನ್ನು ಹಾವೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ರಟ್ಟಿಹಳ್ಳಿ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net