ಕರ್ತವ್ಯಲೋಪ; ಅಣಜಿ ಗ್ರಾ.ಪಂ.ಪಿ.ಡಿ.ಓ ಬಸನಗೌಡ ಪಾಟೀಲ ಅಮಾನತ್ತು

13 RTL 02 BASANGOUDA PATIL
Published on

ರಟ್ಟಿಹಳ್ಳಿ: ತಾಲೂಕಿನ ಅಣಜಿ ಗ್ರಾಮದ ಗ್ರೇಡ್-1 ಕಾರ್ಯದರ್ಶಿ ಪ್ರಭಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಸನಗೌಡ ಪಾಟೀಲ ತಮ್ಮ ಕರ್ತವ್ಯದಲ್ಲಿ ಪೂರ್ಣ ಪ್ರಮಾಣದ ನಿಷ್ಠೆ ಮತ್ತು ಪ್ರಾಮಣಿಕತೆ ತೋರದೆ ತೀವ್ರತರನಾದ ಕರ್ತವ್ಯಲೋಪವೆಸಗಿ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿರುವುದು ತೆನಿಖೆಯಲ್ಲಿ ಕಂಡು ಬಂದಿರುವದರಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ ಅಮಾನುತ್ತು ಆದೇಶವನ್ನು ಹೊರಡಿಸಿದ್ದಾರೆ.

ಅಣಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಸಾರ್ವಜನಿಕರು ನೀಡಿರುವ ದೂರಿನ ಮೇರೆಗೆ ಗ್ರಾಮದ ರಿ.ಸ.ನಃ 95/ಎ/17 ರುದ್ರಭೂಮಿ ಕ್ಷೇತ್ರ 2ಎ-10ಗುಂಟೆ ಜಾಗೆಯನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಕಾಯ್ದರಿಸಲಾಗಿದೆ, ಈ ಜಾಗೆಯಲ್ಲಿ ಮನೆ ಕಟ್ಟಲು ಪ್ರಸ್ಥಾವನೆ ಸಲ್ಲಿಸಿದ್ದಾರೆ, ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ನೀಡಲು ಪೋನ್‌ಪೇ ಮೂಲಕ ಲಂಚ ಪಡೆದಿರುತ್ತಾರೆ, ಸರ್ಕಾರಿ ನೌಕರರಾಗಿ ರಾಜಕೀಯ ಕುರಿತಾದ ಸಂದೇಶಗಳನ್ನು ತಮ್ಮ ವಾಟ್ಸ್‌ಪ್ ಸ್ಟೇಟಸ್‌ನಲ್ಲಿ ಹಾಕಿ ಸರ್ಕಾರದ ನಿಯಮಗಳನ್ನು ಉಲಂಘಣೆ ಮಾಡಿದ್ದಾರೆ, ಗ್ರಾಮ ಪಂಚಯಿತಿಯಲ್ಲಿ ನಿಯಮಬಾಹಿರವಾಗಿ ಕರವಸೂಲಿಗಾರ ಹುದ್ದೆಯನ್ನು ನೇಮಕ ಮಾಡಿಕೊಂಡಿದ್ದಾರೆ, ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ಕೂಲಿ ಮೊತ್ತವನ್ನು ಪಾವತಿಸದೇ ನಿರ್ಲಕ್ಷ್ಯತೆ ವಹಿಸಿದ್ದಾರೆ ಎಂದು ದೂರುದಾರರು ದಾಖಲಾತಿಗಳನ್ನು ಸಲ್ಲಿಸಿದ್ದಾರೆ.

ಈ ದೂರಿನ ಅನ್ವಯ ರಟ್ಟಿಹಳ್ಳಿ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ನೇತೃತ್ವದಲ್ಲಿ ತೆನಿಖಾ ತಂಡವನ್ನು ರಚಿಸಿ ಪರಿಶೀಲನೆ ಮಾಡಿದ್ದು, ಇನ್ನು ಅನೇಕ ಕಾಮಗಾರಿಗಳಲ್ಲಿ ಅವರು ಕರ್ತವ್ಯಲೋಪವೆಸಗಿರುವುದು ತಿಳಿದ್ದು ಬಂದಿದ್ದು ಅ.10ರಿಂದ ಅವರನ್ನು ಅಮನಾತ್ತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net