ರಾಷ್ಟ್ರೋತ್ಥಾನ ಶಾಲೆ ಆಡಳಿತ ಕಚೇರಿ ಉದ್ಘಾಟನೆ ಅ.10ರಂದು

Rashtrothana School
Published on

ಹಾವೇರಿ: ಇಲ್ಲಿನ ಶಹರ ಠಾಣೆ ಸಮೀಪದ ರಾಜೇಂದ್ರನಗರ 2ನೇ ಕ್ರಾಸ್‌ನಲ್ಲಿ ನಗರದ ಹೊರವಲಯ ದೇವಿಹೊಸೂರು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್‌ಸಿ ಶಾಲೆಯ ಆಡಳಿತ ಕಚೇರಿ ಉದ್ಘಾಟನಾ ಸಮಾರಂಭ ಅ.10ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಯಾಗಲಿದೆ.

2026-27ನೇ ಸಾಲಿನಿಂದ ಶಾಲೆ ಆರಂಭವಾಗಲಿದ್ದು, ಆಡಳಿತ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಉದ್ಯಮಿ ಪವನ ಬಹದ್ದೂರ ದೇಸಾಯಿ, ರಾಷ್ಟ್ರೋತ್ಥಾನ ಪರಿಷತ್ ಸದಸ್ಯ ಜಯಣ್ಣ ಎಚ್., ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹಾವೇರಿ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net