

ರಾಣೆಬೆನ್ನೂರ: ನಗರದ ಖನ್ನೂರ ಸಮೂಹ ಸಂಸ್ಥೆಗಳ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಖನ್ನೂರ ರಾಜ್ಯ ಫಿಡೆ ರೇಟೆಡ್ ಓಪನ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಅಕ್ಷಯಾ ಸಾತಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಬೆಂಗಳೂರಿನ ಲೋಟಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜು.1ರಿಂದ 4ರವರೆಗೆ ನಡೆದ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು. ಸುಮಿತಕುಮಾರ ಎಂ.ಎಸ್. ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಪ್ರಶಾಂತ ಜೆ. ನಾಯ್ಕ ತೃತೀಯ ಸ್ಥಾನ, ಬಾಲಕಿಶನ್ ಎ. ನಾಲ್ಕನೇ ಸ್ಥಾನ ಪಡೆದರು. ವಿಜೇತರಿಗೆ ಖನ್ನೂರ ಸಂಸ್ಥೆಯ ಖಜಾಂಚಿ, ಆಯೋಜಕ ಅನುರಾಗ ಪ್ರವೀಣ ಖನ್ನೂರ ಟ್ರೋಫಿ, ಬಹುಮಾನ ವಿತರಿಸಿದರು. ಕರ್ನಾಟಕ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಮಧುಕರ್, ಉಪಾಧ್ಯಕ್ಷೆ ಸ್ವೌಮ್ಯ, ಸುರೇಶಬಾಬು, ಇತರರಿದ್ದರು.
ವಿಜೇತರು ಮುಂಬರುವ ರಾಷ್ಟ್ರೀಯ ಫೀಡೆ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಖನ್ನೂರ ಸಮೂಹ ಸಂಸ್ಥೆ ಪ್ರಕಟಣೆ ತಿಳಿಸಿದೆ.