ರಾಣೆಬೆನ್ನೂರ: ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ಬೆಳೆ ಹಾನಿಗೀಡಾದ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗದೇ ಮನನೊಂದು ತಾಲೂಕಿನ ಕಾಕೋಳ ಗ್ರಾಮದ ರೈತ ವಸಂತ ಮಲ್ಲಪ್ಪ ಬೀರಜ್ಜನವರ (40) ಶನಿವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಸಂತ ಅವರು ತಮ್ಮ ಕುಟುಂಬದ 1 ಎಕರೆ 20 ಗುಂಟೆ ಜಮೀನಿನ ಮೇಲೆ ವ್ಯವಸಾಯಕ್ಕಾಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 20,970 ರೂ. ಬೆಳೆ ಸಾಲ ಪಡೆದಿದ್ದರು. ಪ್ರಕಾಶ ಕೆಂಚಣ್ಣನವರ ಮತ್ತು ನಾಗಪ್ಪ ಐರಣಿ ಎಂಬುವರಿಂದ 2 ಲಕ್ಷ ರೂ. ಕೈಗಡ ಸಾಲ ಮಾಡಿದ್ದರು.
ಸುಮಾರು 2 ವರ್ಷಗಳಿಂದ ಅತಿವೃಷ್ಠಿ ಹಾಗೂ ಅನಾವೃಷ್ಟಿಯಿಂದ ಬೆಳೆ ಸರಿಯಾಗಿ ಬಾರದೇ ಇದ್ದುದರಿಂದ ಬೇಸರಗೊಂಡಿದ್ದರು. ಸಾಲ ಹೇಗೆ ತೀರಿಸುವುದು ಎಂದು ಇದೇ ವಿಚಾರವಾಗಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಣೆಬೆನ್ನೂರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.