ವಾರಾಂತ್ಯ ಜೋಗ್‌ಫಾಲ್ಸ್‌ಗೆ ಹಾವೇರಿ, ರಾಣೆಬೆನ್ನೂರಿನಿಂದ ಸಾರಿಗೆ ಸೌಲಭ್ಯ

8 Jog Falls
Published on

ಹಾವೇರಿ: ಮಳೆಗಾಲ ಪ್ರಾರಂಭವಾಗಿದ್ದು, ಪ್ರತಿ ಭಾನುವಾರ ಹಾಗೂ ರಜಾ ದಿನಗಳಂದು ವಿಶ್ವಪ್ರಸಿದ್ದ ಪ್ರೇಕ್ಷಣೀಯ ಸ್ಥಳ ಜೋಗ ಜಲಪಾತ ವೀಕ್ಷಣೆಗಾಗಿ ಜು.13ರಿಂದ ಹಾವೇರಿ ಮತ್ತು ರಾಣೆಬೆನ್ನೂರ ಬಸ್ ನಿಲ್ದಾಣಗಳಿಂದ ವಿಶೇಷ ವೇಗದೂತ ವಾಹನಗಳ ಕಾರ್ಯಾಚರಣೆ ಆರಂಭವಾಗಲಿದೆ.

ಹಾವೇರಿಯಿಂದ ಜೋಗ್ ಫಾಲ್ಸ್‌ಗೆ ಬೆಳಗ್ಗೆ 8 ಗಂಟೆಗೆ ಹೊರಟು ಶಿರಸಿ, ಸಿದ್ದಾಪುರ ಮಾರ್ಗವಾಗಿ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ದರ್ಶನ ಮಾಡಿಸಿಕೊಂಡು ಜೋಗ ಜಲಪಾತ ವೀಕ್ಷಣೆಗೆ ತೆರಳುವುದು. ವಾಪಸ್ ಅದೇ ಮಾರ್ಗವಾಗಿ ಸಂಜೆ 4 ಗಂಟೆಗೆ ಜೋಗ್ ಫಾಲ್ಸ್ ನಿಂದ ಹೊರಟು ಸಂಜೆ 7 ಗಂಟೆಗೆ ಹಾವೇರಿ ತಲುಪಲಿದೆ.

ರಾಣೆಬೆನ್ನೂರಿನಿಂದ ಜೋಗ್ ಫಾಲ್ಸ್‌ಗೆ ಬೆಳಗ್ಗೆ 8 ಗಂಟೆಗೆ ಹಿರೇಕೆರೂರ, ಶಿರಾಳಕೊಪ್ಪ, ಸೊರಬ, ಸಿದ್ದಾಪುರ ಮಾರ್ಗವಾಗಿ ಹೊರಟು ಜೋಗ ತಲುಪಲಿದೆ. ಸಂಜೆ 4 ಗಂಟೆಗೆ ವಾಪಸ್ ಹೊರಟು ರಾತ್ರಿ 7.30ಕ್ಕೆ ರಾಣೆಬೆನ್ನೂರ ತಲುಪಲಿದೆ. ಮುಂಗಡ ಬುಕ್ಕಿಂಗ್‌ಗೆ ಅವಕಾಶವಿದೆ ಎಂದು ವಾಕರಸಾ ಸಂಸ್ಥೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net