

ಹಾವೇರಿ: ಮೈಕ್ರೋ ಫೈನಾನ್ಸ್‌ಗಳ ಹಾವಳಿ ತಪ್ಪಿಸುವ ಕುರಿತು ರಾಜ್ಯ ಸರ್ಕಾರ ಕಾನೂನು ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಿತ್ತು. ಸುಗ್ರಿವಾಜ್ಞೆ ಹೊರಡಿಸಲು ಕಾನೂನು ಸಚಿವರು ರಾಜ್ಯಪಾಲರನ್ನು ಭೇಟಿ ಮಾಡಿ ವಿವರಣೆ ಕೊಡಬೇಕಿತ್ತು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ರಾಣೆಬೆನ್ನೂರ ನಗರದಲ್ಲಿ ಪರಿವರ್ತನ ಸಂಸ್ಥೆ ಹಮ್ಮಿಕೊಂಡಿರುವ ‘ಕರ್ನಾಟಕ ವೈಭವ’ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಮೈಕ್ರೋ ಪೈನಾನ್ಸ್‌ಗಳ ವಿರುದ್ಧದ ಸುಗ್ರಿವಾಜ್ಞೆ ತಿರಸ್ಕರಿಸಿದ ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದರು. ಅನಧಿಕೃತ ಸಾಲ ಕೊಡುವುದು ಕಾನೂನು ವಿರುದ್ಧವಾದದ್ದು ಎಂದರು.
ರಿಸರ್ವ್ ಬ್ಯಾಂಕ್‌ನಿಂದ ಅನುಮತಿ ತೆಗೆದುಕೊಂಡು ಸಾಲ ಕೊಡವುದು ಒಂದು ಭಾಗ. ಆದರೆ, ಮೈಕ್ರೋ ಫೈನಾನ್ಸ್‌ನವರು ಆರ್‌ಬಿಐ ಅನುಮತಿ ಪಡೆಯದಿರುವುದು ಸರಿಯಲ್ಲ. ನಾನು ಈ ಹಿಂದೆ ಯಾರು ಖಾಸಗಿ ಅವರ ಬಳಿ ಸಾಲ ತೆಗೆದುಕೊಂಡಿರುತ್ತಾರೋ ಅದನ್ನು ಮನ್ನಾ ಮಾಡಬೇಕು ಎಂದು ರಾಷ್ಟ್ರಪತಿಯವರ ಬಳಿ ಹೋಗಿದ್ದೆ. ನಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ಮೇಲೆ ಅದನ್ನು ಕಸದ ಬುಟ್ಟಿಗೆ ಹಾಕಿದರು. ಸರ್ಕಾರಕ್ಕೆ ಶಕ್ತಿ ಇದೆ. ಅವರು ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದರು.
ಬಿಜೆಪಿಯಲ್ಲಿ ಬಣ ಬಡಿದಾಟದ ವಿಚಾರ ನನಗೆ ಸಂಬಂಧ ಇಲ್ಲದ ವಿಚಾರ. ಅವರ ಪಕ್ಷದ ಭಿನ್ನಾಭಿಪ್ರಾಯಗಳನ್ನು ಅವರು ಸರಿ ಮಾಡುತ್ತಾರೆ. ನಮ್ಮ ಕಾರ್ಯಕರ್ತರು ಯಾಕೆ ಗೊಂದಲಕ್ಕೆ ಒಳಗಾಗುತ್ತಾರೆ. ಬಿಜೆಪಿಯಲ್ಲಿ ಸರಿ ಮಾಡುವಂತಹ ಎಲ್ಲ ಶಕ್ತಿ ಅವರಲ್ಲಿದೆ. ಅವರ ಪಕ್ಷದಲ್ಲಿ ನಡೆಯುತ್ತಿರುವ ತೀರ್ಮಾನಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ ಎಂದರು.
ಮೇಕೆದಾಟು ಯೋಜನೆಗೆ ಒಪ್ಪಿಗೆ ಪಡೆಯುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಎಚ್‌ಡಿಕೆ, ಪಕ್ಕದ ತಮಿಳುನಾಡಿನಲ್ಲಿ ಸರ್ಕಾರ ಮಾಡಿದ್ದಾರೆ. ಇಲ್ಲಿನೆ ಕೆವರು ಅವರ ಪಾಲುದಾರರು ಅಲ್ಲವೇ. ಮೊದಲು ಅವರ ಬಳಿ ಹೋಗಿ ಒಪ್ಪಿಗೆ ತೆಗೆದುಕೊಳ್ಳಲ್ಲಿ. ಆಮೇಲೆ ನರೇಂದ್ರ ಮೋದಿಜಿಗೆ ಹೇಳಿ ಒಪ್ಪಿಗೆ ಕೊಡಿಸೋಣ ಎಂದರು.