ಬಾಲ ಕಾರ್ಮಿಕ ಪತ್ತೆ, ಪಾಲಕರಿಗೆ ಹಸ್ತಾಂತರ

Published on

ಹಾವೇರಿ: ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಂಗವಾಗಿ ರಾಣೆಬೆನ್ನೂರ ತಾಲೂಕಿನಲ್ಲಿ ವಿವಿಧ ಗ್ಯಾರೇಜ್, ವಾಣಿಜ್ಯ ಅಂಗಡಿಗಳಲ್ಲಿ ಕಾರ್ಮಿಕ ನಿರೀಕ್ಷಕರ ನೇತೃತ್ವದ ತಂಡ ಮಂಗಳವಾರ ತಪಾಸಣೆ ಕಾರ್ಯ ನಡೆಸಿ, ಓರ್ವ ಬಾಲ ಕಾರ್ಮಿಕನನ್ನು ರಕ್ಷಣೆ ಮಾಡಿ, ಪಾಲಕರಿಗೆ ಹಸ್ತಾಂತರಿಸಿದೆ. ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಹಾಗೂ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಯಿತು. ಕಾರ್ಮಿಕ ನಿರೀಕ್ಷಕ ದೇವೇಂದ್ರ ನಾಟೀಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಾಘವೇಂದ್ರ ಬ. ಶಿರೂರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೈ.ಟಿ.ಪೂಜಾರ, ಶಿಕ್ಷಣ ಇಲಾಖೆಯ ಶಿವಪ್ಪ ಬನ್ನಿಕೋಡ, ಪೊಲೀಸ್ ಇಲಾಖೆಯ ಹನುಮಂತಪ್ಪ ಎಚ್., ಮಕ್ಕಳ ರಕ್ಷಣಾ ಘಟಕದ ವಿನಯ ಗುಡಗೂರ, ಚೈಲ್ಡ್‌ಲೈನ್‌ನ ಚಂದ್ರ ಕಳ್ಳಿಹಾಳ, ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net