ರಾಣೆಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಬನಶಂಕರಿದೇವಿ ಜಾತ್ರಾ ಮಹೋತ್ಸವ ಜ.13ರಂದು ಜರುಗಲಿದೆ.
ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ದೇವಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಉಡಿ ತುಂಬುವುದು ಹಾಗೂ ಮಹಾಮಂಗಳಾರತಿ ಪೂಜೆ ನೆರವೇರಲಿದೆ. ನಂತರ ಸುಮಂಗಲೆಯರಿಗೆ ಉಡಿ ತುಂಬಲಾಗುವುದು. ಮಧ್ಯಾಹ್ನ 12ರಿಂದ ಅನ್ನ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಶ್ರೀ ಶಿವಾನಂದ ಮಠದಿಂದ ವಿವಿಧ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೂರ್ತಿ ಮೆರವಣಿಗೆ ನಡೆಯಲಿದೆ.
ರಾತ್ರಿ 9ಕ್ಕೆ ಯಕಲಾಸಪುರದ ಜನನಿ ಜಾನಪದ ಕಲಾ ವೇದಿಕೆಯಿಂದ ಜಾನಪದ ನೃತ್ಯ ರೂಪಕ ಹಾಗೂ ಜಾನಪದ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎಸ್.ಶಿರಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.