ರಾಮಭಕ್ತಿಯಲ್ಲಿ ಮಿಂದೆದ್ದ ಭಕ್ತರು; ಜಿಲ್ಲೆಯ ಹಲವೆಡೆ ರಾಮ ತಾರಕ ಯಾಗ, ಹೋಮ, ಹವನ, ವಿಶೇಷ ಪೂಜೆ

22 HVR 2 C
Published on

ಹಾವೇರಿ: ಅಯೋಧ್ಯೆಯಲ್ಲಿ ಬಾಲರಾಮನ ಪಟ್ಟಾಭಿಷೇಕ ಆಗುತ್ತಿದ್ದ ಸಂದರ್ಭದಲ್ಲಿ ಸೋಮವಾರ ಜಿಲ್ಲೆಯಲ್ಲೂ ಶ್ರೀರಾಮನಿಗೆ ವಿಶೇಷ ಪೂಜೆ, ಯಾಗ, ಹೋಮ, ಹವನ, ಪಾನಕ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾಮನ ಭಕ್ತಿಯಲ್ಲಿ ಮಿಂದೆದ್ದ ಭಕ್ತರಿಂದ ಎಲ್ಲೆಲ್ಲೂ ಜೈ ಶ್ರೀರಾಮ್ ಉದ್ಘೋಷ ಕೇಳಿಬಂತು.
ಜಿಲ್ಲೆಯ ವಿವಿಧ ಮಠ- ಮಂದಿರಗಳಲ್ಲಿ ಸಹಸ್ರಾರು ಭಕ್ತರು ಬೆಳಗ್ಗೆಯಿಂದಲೇ ಶುಭ್ರ ಉಡುಪು ಧರಿಸಿ ರಾಮ ನಾಮ ಜಪದಲ್ಲಿ ತೊಡಗಿದ್ದರು. ವಿಶೇಷ ಪೂಜೆ ನೆರವೇರಿಸಿ ರಾಮಭಜನೆ ಮಾಡಿದರು. ಹಳ್ಳಿ ಹಳ್ಳಿಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪ್ರಸಾದ, ಪಾನಕ ವಿತರಿಸಿದ್ದು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net