ರಾಮ ಮಂದಿರದಲ್ಲಿ ಶ್ರೀರಾಮ ತೊಟ್ಟಿಲೋತ್ಸವ

17 HVR 7
Published on

ಹಾವೇರಿ: ಶ್ರೀರಾಮ ನವಮಿ ನಿಮಿತ್ತ ಬುಧವಾರ ನಗರದ ರಾಮ ಮಂದಿರದಲ್ಲಿ ತೊಟ್ಟಿಲೋತ್ಸವ, ಪಲ್ಲಕ್ಕಿ ಮೆರವಣಿಗೆ ಶ್ರದ್ಧಾ ಭಕ್ತಿಯೊಂದಿಗೆ ವೈಭವದಿಂದ ನಡೆಯಿತು. ಬೆಳಗ್ಗೆಯಿಂದಲೇ ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯನ ಮೂರ್ತಿಗೆ ವಿಶೇಷ ಪೂಜೆ, ದರ್ಶನ, ಅಭಿಷೇಕ ಜರುಗಿತು.
ಹೂವುಗಳಿಂದ ವಿಶೇಷ ಅಲಂಕಾರ ಮಾಡಿದ್ದ ತೊಟ್ಟಿಲಲ್ಲಿ ರಾಮನ ಮೂರ್ತಿ ಇಟ್ಟು ಮಹಿಳೆಯರು ಜೋಗುಳ ಹಾಡಿ ತೊಟ್ಟಿಲೋತ್ಸವ ನೆರವೇರಿಸಿದರು.
ಆಗಮಿಸಿದ್ದ ಭಕ್ತರು ತೊಟ್ಟಿಲು ತೂಗಿ ಭಕ್ತಿ ಸಮರ್ಪಿಸಿದರು. ರಾಮ ನವಮಿ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಕ್ತಾದಿಗಳು ಸರತಿಯಲ್ಲಿ ನಿಂತು ರಾಮನ ದರ್ಶನ ಪಡೆದರು. ವಿಶೇಷ ಪೂಜೆ ಸಲ್ಲಿಸಿದರು. ಬಂದ ಭಕ್ತರಿಗೆ ದೇವಸ್ಥಾನದ ವತಿಯಿಂದ ಪಾನಕ, ಕೊಸಂಬ್ರಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net