ಗೋಲಿಬಾರ್‌ಗೆ 17 ವರ್ಷ ಹಿನ್ನೆಲೆ ಹುತಾತ್ಮ ದಿನಾಚರಣೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ, ರಸ್ತೆ ತಡೆ; ಸ್ಥಳಕ್ಕೆ ಡಿಸಿ ಆಗಮಿಸಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್

Raita Sangha
Published on

ಹಾವೇರಿ: ಹಾವೇರಿ ಗೋಲಿಬಾರ್ ಘಟನೆ ನಡೆದು 16 ವರ್ಷ ಪೂರ್ಣಗೊಂಡು 17ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘದಿಂದ ರೈತ ಹುತಾತ್ಮ ದಿನ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮುಖ್ಯರಸ್ತೆ ಸಂಚಾರ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರದಷ್ಟೇ ಬರ ಪರಿಹಾರವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು. 300 ಕೋಟಿಗೂ ಅಧಿಕ ಮೊತ್ತದ ಬೆಳೆ ವಿಮೆಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಬೆಳೆ ಪರಿಹಾರ ಇಲ್ಲ, ಬೆಳೆ ವಿಮೆ ಇಲ್ಲವೇ ಇಲ್ಲ. ಗೊಬ್ಬರದ ಜತೆ ಲಿಂಕ್ ಮಾಡ್ತಿದಾರೆ. ಗೊಬ್ಬರ ಸರಿ ಇಲ್ಲ. ಹತ್ತಾರು ಕಾರಣ ಕೊಡುತ್ತಿದ್ದಾರೆ. ಹೋರಾಟದ ಬದಲಾವಣೆಗೆ ಚರ್ಚೆ ನಡೆದಿದೆ. ಸಂಘಟನೆ ಜತೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಲಾಗುವುದು. ರೈತರಲ್ಲಿ ಆತ್ಮವಿಶ್ವಾಸ ಬೇಕು. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ನಿಮ್ಮೊಂದಿಗೆ ಸಂಘ ಇದೆ ಎಂದು ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಆಗಮಿಸುವಂತೆ ಪಟ್ಟು ಹಿಡಿದರು. ನಂತರ ಡಿಸಿ ಸ್ಥಳಕ್ಕಾಗಮಿಸಿ ಮನವಿ ಪತ್ರ ಸ್ವೀಕರಿಸಿ, ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ನೂರಾರು ರೈತರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net