ಜಿಲ್ಲೆಯ ಹಲವೆಡೆ ರಭಸವಾದ ಮಳೆ; ಕಬ್ಬೂರ ಗ್ರಾಮದಲ್ಲಿ ಮನೆಯ ಮೇಲೆ ಬಿದ್ದ ಮರ

24 HVR 8
Published on

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ಶಹರ, ರಾಣೆಬೆನ್ನೂರ, ಶಿಗ್ಗಾಂವಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ಕೆಲಕಾಲ ರಭಸವಾಗಿ ಮಳೆ ಸುರಿಯಿತು.

ಬೆಳಗ್ಗೆಯಿಂದ ಸಂಜೆವರೆಗೆ ಪ್ರಖರವಾದ ಬಿಸಿಲಿನಿಂದ ಭೂಮಿ ಕಾದ ಕಾವಲಿಯಂತಾಗಿತ್ತು. ಸಂಜೆಯಾಗುತ್ತಿದ್ದಂತೆ ಜೋರಾದ ಗಾಳಿಯೊಂದಿಗೆ ಮಳೆ ಆರಂಭವಾಯಿತು. ಸುಮಾರು ಅರ್ಧ ಗಂಟೆ ಮಳೆ ಸುರಿಯಿತು. ಕಾದಿದ್ದ ಭೂಮಿ ತಂಪಾಯಿತು. ಕೆಲವೆಡೆ ಆಲಿಕಲ್ಲು ಮಳೆ ಆಯಿತು. ವಾರದೊಳಗೆ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಇದು ಮೂರನೇ ಮಳೆಯಾಗಿದೆ.

ಹಾವೇರಿ ತಾಲೂಕು ಕಬ್ಬೂರ ಗ್ರಾಮದ ಸಿದ್ದಪ್ಪ ಎಂಬುವರ ಮನೆಯ ಮೇಲೆ ಮಳೆಗಾಳಿಗೆ ಬೃಹತ್ ನೀಲಗಿರಿ ಮರ ಉರುಳಿ ಬಿದ್ದಿತು. ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಮನೆಯ ಹಂಚುಗಳು ಒಡೆದ ಪರಿಣಾಮ ಮನೆಯೊಳಗೆ ಮಳೆ ನೀರು ಹರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net