ಬಿಸಿಲಿಗೆ ಕಾದಿದ್ದ ಜಿಲ್ಲೆಗೆ ತಂಪೆರೆದ ಮಳೆರಾಯ

8 Rain
Published on

ಹಾವೇರಿ: ಈ ಬಾರಿ ಬೇಸಿಗೆಯಲ್ಲಿ ಹೆಚ್ಚಿನ ಬಿಸಿಲಿನ ತಾಪಕ್ಕೆ ಕಾದಿದ್ದ ಜಿಲ್ಲೆಗೆ ಸೋಮವಾರ ಮಳೆರಾಯ ಕೃಪೆ ತೋರುವ ಮೂಲಕ ತಂಪೆರೆದಿದ್ದಾನೆ. ಇದರಿಂದ ಜಿಲ್ಲೆಯ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಹಾವೇರಿ ಶಹರ, ಗ್ರಾಮೀಣ ಪ್ರದೇಶ, ರಟ್ಟಿಹಳ್ಳಿ, ಹಿರೇಕೆರೂರ, ರಾಣೆಬೆನ್ನೂರ, ಬ್ಯಾಡಗಿ, ಹಾನಗಲ್ಲ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ರಾತ್ರಿ ಉತ್ತಮವಾದ ಮಳೆಯಾಗಿದೆ. ಸಂಜೆಯಿಂದಲೇ ಮಿಂಚು, ಗುಡುಗು ಆರ್ಭಟ ಶುರುವಾಗಿತ್ತು. ಸೂರ್ಯ ಮರೆಯಾಗುತ್ತಿದ್ದಂತೆ ಮಳೆಯ ರಭಸ ಹೆಚ್ಚಾಯಿತು. ಹಲವೆಡೆ ಮಳೆಯ ನೀರು ಚರಂಡಿಗಳಲ್ಲಿ ತುಂಬಿ ರಸ್ತೆ ಮೇಲೆ ಹರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net