ಕೆಂಡದಂತಾಗಿದ್ದ ಭುವಿಗೆ ತಂಪೆರೆದ ವರುಣ

29 Rain 1
Published on

ಹಾವೇರಿ: ಅತಿಯಾದ ಬಿಸಿಲಿನಿಂದ ಕಂಗೆಟ್ಟಿದ್ದ ಹಾವೇರಿ ನಗರದ ಜನತೆ ಶನಿವಾರ ಅರ್ಧ ಗಂಟೆ ಸುರಿದ ಮಳೆಯಿಂದಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಕಾದು ಕಾದು ಕೆಂಡದಂತಾಗಿದ್ದ ಭೂಮಿಗೆ ವರುಣ ತಂಪೆರೆದಿದ್ದಾನೆ.
ಬೆಳಗ್ಗೆ ತುಸು ತಡವಾಗಿ ಕಾಣಿಸಿಕೊಂಡ ಸೂರ್ಯ ಆಗಲೇ ಮಳೆಯ ಮುನ್ಸೂಚನೆಯನ್ನು ನೀಡಿದ್ದ. ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಮಳೆಯ ಆಗಮನಕ್ಕೆ ಸಾಕ್ಷಿಯಾಗಿತ್ತು. ರಾತ್ರಿ 7.30ಕ್ಕೆ ಶುರುವಾದ ಮಳೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ರಭಸವಾಗಿ ಸುರಿಯಿತು. ಕೆಲಸ, ಕಾರ್ಯಗಳನ್ನು ಮುಗಿಸಿ ಮನೆಗೆ ತೆರಳುತ್ತಿದ್ದ ಜನತೆಗೆ ಮಳೆ ಅಡ್ಡಿಯಾಗಿತ್ತು. ಮಳೆಯಿಂದಾಗಿ ಚರಂಡಿ, ರಸ್ತೆ ತುಂಬಿನ ನೀರು ಹರಿಯಿತು. ಜಿಲ್ಲೆಯ ರಟ್ಟಿಹಳ್ಳಿ ಸೇರಿದಂತೆ ಕೆಲವೆಡೆ ಮಳೆ ಸುರಿದ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net