ಹಾವೇರಿ: ಹುಬ್ಬಳ್ಳಿ ರೈಲು ನಿಲ್ದಾಣದ ಪಿಟ್ ಲೈನ್‌ನಲ್ಲಿ ರೈಲುಗಾಡಿ ಸಂಖ್ಯೆ16214ರ ಶೌಚಗೃಹ ಒಳಗೆ ಅ.22ರಂದು 30ರಿಂದ 35 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಶೌಚಗೃಹದ ಒಳಗೆ ಡೋರ್ ಲಾಕ್‌ಮಾಡಿಕೊಂಡು ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯ 5.2 ಅಡಿ ಎತ್ತರ, ಕೋಲುಮುಖ, ಗೋದಿಮೈಬಣ್ಣ ಹೊಂದಿದ್ದು, ಬಿಳಿ ಬಣ್ಣದ ಕಪ್ಪು, ನೀಲಿ ಬಣ್ಣದ ಗೆರೆಯುಳ್ಳ ತುಂಬು ತೋಳಿನ ಶರ್ಟ್, ಪಿಂಕ್ ಕಲರ್ ಬನಿಯನ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈತನ ವಾರಸುದಾರರು ಇದ್ದಲ್ಲಿ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆ ದೂ.ಸಂ. 0836-2384751 ಸಂಪರ್ಕಿಸಲು ಕೋರಲಾಗಿದೆ.