ರಾಘವೇಂದ್ರ ಸ್ವಾಮಿಗಳ 314ನೇ ಆರಾಧನಾ ಮಹೋತ್ಸವ

9 Raghavendra swamy
Published on

ಹಾವೇರಿ: ನಗರದ ವೈದ್ಯ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನಗರದ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 314ನೇ ಆರಾಧನಾ ಮಹೋತ್ಸವ ಅಂಗವಾಗಿ ಆ.9ರಿಂದ ಆ.12ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಆ.10ರಂದು ಪೂರ್ವರಾಧನೆ ನಿಮಿತ್ತ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿವೆ. ಆ.11ರಂದು ಮಧ್ಯಾರಾಧನೆ, ಆ.12ರಂದು ಉತ್ತರಾರಾಧನೆ ಪ್ರಯುಕ್ತ ಪೂಜಾ ಕೈಂಕರ್ಯಗಳು ಹಾಗೂ ಮಹಾ ರಥೋತ್ಸವ ನಡೆಯಲಿದೆ. ಆ.13ರಂದು ಬೆಳಗ್ಗೆ 7ಕ್ಕೆ ಪ್ರಾಯಶ್ಚಿತ ಹೋಮ, ತತ್ವ ಹೋಮ, ಸುಕೃತ ಹೋಮ, ಗೋಪೂಜೆ, ಅವಭೃತ ಮಂಗಳ ಸ್ನಾನ, ಅಷ್ಟೋತ್ತರ ಅಭಿಷೇಕ, ಮಹಾ ಮಂತ್ರಾಕ್ಷತೆ ನಡೆಯಲಿದೆ ಎಂದು ಹಾವೇರಿಯ ವೈದ್ಯ ಫ್ಯಾಮಿಲಿ ಟ್ರಸ್ಟ್‌ನ ಧರ್ಮದರ್ಶಿ ಹರಿಕೃಷ್ಣ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net