ವಿವಿಐಪಿ ಸರ್ಕೀಟ್ ಹೌಸ್ ಕಾಮಗಾರಿಗೆ ಶಿಲಾನ್ಯಾಸ; 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಕಟ್ಟಡ

5 HVR 8
Published on

ಹಾವೇರಿ: ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 9 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ವಿವಿಐಪಿ ಸರ್ಕೀಟ್ ಹೌಸ್ ಕಟ್ಟಡದ ಕಾಮಗಾರಿಗೆ ಮಂಗಳವಾರ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಶಿಲಾನ್ಯಾಸ ನೆರವೇರಿಸಿದರು.
ಅತಿ ಗಣ್ಯರಿಗಾಗಿ ಈ ಪ್ರವಾಸಿ ಮಂದಿರ ನಿರ್ಮಿಸಲಾಗುತ್ತಿದೆ. ಈಗಾಗಲೇ 6.28 ಕೋಟಿ ರೂ. ಟೆಂಡರ್ ಅನಮೋದಿಸಲಾಗಿದೆ. ಮೂರು ಅಂತಸ್ತಿನ ಈ ಕಟ್ಟಡದಲ್ಲಿ ಕೆಳ ಮಹಡಿಯಲ್ಲಿ ಒಂದು ವಿವಿಐಪಿ ಕೊಠಡಿ, ಮೂರು ಇತರ ಕೊಠಡಿ, ಒಂದು ಡೈನಿಂಗ್ ಹಾಲ್, ಲಿವಿಂಗ್ ರೂಂ ಮತ್ತು ಕಿಚನ್ ಹಾಗೂ ಸಾರ್ವಜನಿಕ ಶೌಚಗೃಹಿರಲಿದೆ. ಮೊದಲ ಮಹಡಿಯಲ್ಲಿ ಒಂದು ವಿವಿಐಪಿ ಕೊಠಡಿ, ಇತರ ಮೂರು ಕೊಠಡಿ, ಮೂರು ಮೀಟಿಂಗ್ ಹಾಲ್, ಒಂದು ಡಾರ್ಮೆಟ್ರಿ, ಒಂದು ದಾಸ್ತಾನು ಕೊಠಡಿ ಹಾಗೂ ಎರಡನೇ ಮಹಡಿಯಲ್ಲಿ ಒಂದು ವಿವಿಐಪಿ ಕೊಠಡಿ, ಮೂರು ಇತರ ಕೊಠಡಿ, ಒಂದು ಮೀಟಿಂಗ್ ಹಾಗೂ ಡಾರ್ಮೆಟ್ರಿ ನಿರ್ಮಾಣಕ್ಕೆ ವಿನ್ಯಾಸ ಮಾಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಸಚಿವರಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಎಂ.ಎಂ. ಹಿರೇಮಠ, ಲೋಕೋಪಯೋಗಿ ಇಲಾಖೆ ಎಇಇ ಶ್ರೀಮಂತ ಹದಗಲ್, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net