ಪುರಸಿದ್ದೇಶ್ವರ ದೇಗುಲದ ಕಾರ್ತಿಕೋತ್ಸವ ಡಿ.16ರಂದು

Published on

ಹಾವೇರಿ: ನಗರದ ಪುರಸಿದ್ದೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಡಿ.16ರಂದು ಸಂಜೆ 6 ಗಂಟೆಗೆ ಜರುಗಲಿದೆ.

ಕಾರ್ತಿಕೋತ್ಸವಕ್ಕೆ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಚಾಲನೆ ನೀಡುವರು. ಬೆಳಗ್ಗೆ ದೇವಸ್ಥಾನದಲ್ಲಿ ಅಭಿಷೇಕ, ಅಲಂಕಾರ, ಸಂಜೆ ಕಾರ್ತಿಕೋತ್ಸವ ನಡೆಯಲಿದೆ. ಕಾರ್ತಿಕೋತ್ಸವದ ಅಂಗವಾಗಿ ರಾತ್ರಿ 8 ಗಂಟೆಗೆ ಹುಕ್ಕೇರಿ ಮಠದ ಶಿವಲಿಂಗೇಶ್ವರ ದಾಸೋಹ ಭವನದಲ್ಲಿ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net