ಪುಣೆಯಲ್ಲಿ ಕನ್ನಡ ಹಬ್ಬ ಆಚರಣೆ

7 HVR 3 B
Published on

ಹಾವೇರಿ: ಮಹಾರಾಷ್ಟ್ರದ ಪುಣೆ ಮಹಾನಗರದಲ್ಲಿ ಇತ್ತೀಚೆಗೆ ನಮ್ಮವರು ಸಂಘದ ವತಿಯಿಂದ ಎರಡನೇ ಕನ್ನಡ ಹಬ್ಬ ಆಚರಿಸಲಾಯಿತು.
ಜಾನಪದ ಕವಿ ಗವಿಸಿದ್ದಯ್ಯ ಹಳ್ಳಿಕೇರಿಮಠ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಬಸವರಾಜ ಹಿರೇಮಠ, ಯೋಗ ಶಿಕ್ಷಕಿ ಡಾ.ಭಾಗೀರತಿ ಕನ್ನಡತಿ, ಚಂದ್ರಶೇಖರ ಹಾರೇಕೋಡೆ, ಶಿವಲಿಂಗ ಢವಳೇಶ್ವರ, ಮತ್ತಿತರರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಕ್ಯಾಟೆನ್ಸಿಸ್ ಇಂಡಿಯಾ ಪೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಚಂದ್ರಕಾಂತ ಜೋಶಿ, ಶ್ರೀನಿವಾಸ ಸೊಲ್ಯುಶನ್ಸ್ ವ್ಯವಸ್ಥಾಪಕ ನಿರ್ದೇಶಕ ಶಂಕರ ಹಾದಿಮನಿ, ಉದ್ಯಮಿ ಮಡಿವಾಳೇಶ ಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net