

ಹಾವೇರಿ: ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ.ಎಂ.ಎಸ್.ಶೇಷಗಿರಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ನಯನಾ ಪ್ರಸಾದ ಹೂಲಿಕಂತಿಮಠಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಕೆಎಲ್‌ಇ ಡಾ.ಎಂಎಸ್‌ಎಸ್‌ಇಟಿಯ ಡಾ.ಪ್ರವೀಣ ಘೋರ್ಪಡೆ ಹಾಗೂ ಗೋವಾ ಇಂಜಿನಿಯರಿಂಗ್ ಕಾಲೇಜ್‌ನ ಡಾ.ಕೆ.ಜಿ.ಗುಪ್ತಾ ಅವರ ಮಾರ್ಗದರ್ಶನದಲ್ಲಿ ‘ತ್ಯಾಜ್ಯ ಫೌಂಡ್ರಿ ಮರಳಿನ ಮರುಬಳಕೆ ಮತ್ತು ಮರುಬಳಕೆಗಾಗಿ ವೈಜ್ಞಾನಿಕ ತನಿಖೆ’ ಎಂಬ ವಿಷಯದ ಕುರಿತು ಪಿಎಚ್‌ಡಿ ಪ್ರಬಂಧ ಮಂಡಿಸಿದ್ದರು. ಇವರ ಸಂಶೋಧನೆಯ ವಿಷಯ ಹಲವು ಅಂತರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟಗೊಂಡಿದೆ ಎಂದು ಕ್ಯಾಪ್ಟನ್ ಪ್ರಸಾದ ಹೂಲಿಕಂತಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.