ಹಾವೇರಿ: ಇಲ್ಲಿನ ರಾಜೇಂದ್ರ ನಗರದ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿ ದಾಕ್ಷಾಯಿಣಿ ಬಿ, ಗಾಣಿಗೇರ ಸೇರಿದಂತೆ ಹಲವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಮಲ್ ಎಸ್. ಹಿಂಚಿಗೇರಿ, ರತ್ನವ್ವ ಜಿ, ಹೇರೂರ, ಯಶೋಧಾ ಎಂ. ಮಾಸೂರ, ನೇತ್ರಾವತಿ ಎಸ್. ಮೇಳದವರ, ಲೀಲಾ ಎ. ಗಡಾದ, ಸುಧಾ ಎಚ್. ಆನೂರಶೆಟ್ರು, ಪ್ರವೀಣಾ ಎಂ. ಕೋರಿಶೆಟ್ಟರ, ಹೇಮಲತಾ ಪಿ. ಕರ್ಜಗಿ, ಶೈಲಾ ಜೆ. ಬಸೇಗೆಣ್ಣಿ, ಪಾರ್ವತಿ ಪಿ. ಭಾವನೂರ, ರೂಪಾ ಎಸ್. ಯರೇಶಿಮಿ, ಸುಮನ್ ಸಿ. ಪುತಳೇಕರ ನಿರ್ದೇಶಕರಾಗಿ 5 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಮಂಜುಳಾ ಬಿ. ಸಜ್ಜನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.