ಡಾ.ಪ್ರಭಾಕರ ಕೋರೆ ಈ ನಾಡಿನ ಸಾಧನಾ ಶಿಖರ; ಬಸವರಾಜ ಮಾಸೂರ

1 HVR 7
filter: 0; fileterIntensity: 0.0; filterMask: 0; module: photo; hw-remosaic: false; touch: (-1.0, -1.0); modeInfo: ; sceneMode: 2; cct_value: 5230; AI_Scene: (200, 0); aec_lux: 107.06308; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: -1; weatherinfo: null; temperature: 40;
Published on

ಹಾವೇರಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು, ಶಿಕ್ಷಣ ಕ್ಷೇತ್ರದ ಅದ್ವಿತೀಯ ಸಾಧಕರು, ರಾಜಕೀಯ-ಸಹಕಾರಿ ರಂಗಗಳಲ್ಲಿ ಅಚ್ಚಳಿಯದ ಕಾರ್ಯ ಮಾಡಿರುವ ಡಾ.ಪ್ರಭಾಕರ ಕೋರೆಯವರು ಈ ನಾಡಿನ ಸಾಧನಾ ಶಿಖರವಾಗಿದ್ದಾರೆ ಎಂದು ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಬಸವರಾಜ ಮಾಸೂರ ಹೇಳಿದರು.
ನಗರದ ಹೊರ ವಲಯದಲ್ಲಿರುವ ಇಜಾರಿ ಲಕಮಾಪುರದ ಜ್ಞಾನಜ್ಯೋತಿ ಅಂಧ ಮಕ್ಕಳ ವಸತಿ ಶಾಲೆಯಲ್ಲಿ ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ ವತಿಯಿಂದ ಗುರುವಾರ ಆಯೋಜಿಸಿದ್ದ ಡಾ.ಪ್ರಭಾಕರ ಕೋರೆಯವರ 77ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್ಥಿಕ ಮತ್ತು ಸಾಮಾಜಿಕ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಕೋರೆಯವರು ಬಡವರು, ರೈತರ ಕುರಿತು ವಿಶೇಷ ಕಾಳಜಿ ಹೊತ್ತು ಅದ್ಭುತ ಕಾರ್ಯಸಾಧನೆ ಮಾಡಿದ್ದಾರೆ ಎಂದರು.
ಸಮಾರಂಭದಲ್ಲಿ ಶಾಲಾ ಮಕ್ಕಳಿಗೆ ವಸ್ತ್ರ ಹಾಗೂ ಸಿಹಿತಿಂಡಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸೊಸೈಟಿಯ ಪದಾಧಿಕಾರಿಗಳಾದ ಶಿವಯೊಗೆಪ್ಪ ಕೊಳ್ಳಿ, ನಿರಂಜನ ಹೆರೂರ, ವಿನಯ ಶಿರೂರ, ಸುಭಾಸಚಂದ್ರ ಹುರಳಿಕುಪ್ಪಿ, ದಯಾನಂದ ಯಡ್ರಾಮಿ, ಶಾಖೆಯ ವ್ಯವಸ್ಥಾಪಕರು, ಸಿಬ್ಬಂದಿ, ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net