ಜೂ.13ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Published on

ಹಾವೇರಿ: ಬಸವನಕಟ್ಟಿ 110 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜೂ.13ರಂದು ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಅಂದು ಈ ಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್‌ಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಬಸವನಕಟ್ಟಿ, ಸೋಮನಕಟ್ಟಿ, ಮಾಚಾಪುರ, ಬೂದಗಟ್ಟಿ, ಕನವಳ್ಳಿ, ಹನುಮನಹಳ್ಳಿ, ಕಾಟೇನಹಳ್ಳಿ, ಅಗಡಿ, ತಿಮ್ಮೇನಹಳ್ಳಿ, ಮಾಳಾಪುರ, ಗಾಂಧಿಪುರ, ಜಾನಕೊಪ್ಪ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net