ಆ.29ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Power cutt
Published on

ಹಾವೇರಿ: ಹಾವೇರಿ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಇರುವ ಕಾರಣ ಆ.29ರಂದು 110 ಕೆವಿ ಹಾವೇರಿ, 110 ಕೆವಿ ಕುಳೇನೂರ, 33 ಕೆ.ವಿ ಕೇರಿಮತ್ತಿಹಳ್ಳಿ ಹಾಗೂ ಗಾಂಧೀಪುರ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ ಫೀಡರ್‌ಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಸಂಪೂರ್ಣ ಹಾವೇರಿ ನಗರ, ಆಲದಕಟ್ಟಿ, ಚಿಕ್ಕಲಿಂಗದಹಳ್ಳಿ, ದೇವಗಿರಿ, ಡಿ.ಸಿ.ಆಫೀಸ್, ದೇವಗಿರಿಯಲ್ಲಾಪುರ, ನಾಗನೂರ, ವರದಾಹಳ್ಳಿ, ಕೋಳೂರು, ಗಣಜೂರ, ಕರ್ಜಗಿ, ಯತ್ತಿನಹಳ್ಳಿ, ದೇವಿಹೊಸೂರ, ದಿಡಗೂರ, ಹಿರೇಲಿಂಗದಹಳ್ಳಿ, ನೆಲೋಗಲ್, ಹೊಂಬರಡಿ, ಹೊಸಳ್ಳಿ, ಕಬ್ಬೂರ, ಕಲ್ಲಾಪುರ, ಕನಕಾಪುರ, ಕೆರಿಮತ್ತಿಹಳ್ಳಿ, ತೋಟದಯಲ್ಲಾಪುರ, ವೀರಾಪುರ, ವೆಂಕಟಾಪುರ, ಗೌರಾಪುರ, ಎಸ್.ಪಿ. ಆಫೀಸ್, ಕುರುಬಗೊಂಡ, ಬಿದರಗಡ್ಡಿ, ಕೋಡಿಹಳ್ಳಿ, ತಿಮ್ಮಾಪುರ, ಕುಳೇನೂರು, ಸಂಗೂರ, ಹೊಸೂರು, ಕುಳೇನೂರ ಶುಗರ್ ಫ್ಯಾಕ್ಟರಿ ಪ್ಲಾಟ್‌ಗಳು ಹಾಗೂ ಈ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net