ಅಂಚೆ ಇಲಾಖೆ ಪಿಂಚಣಿ ಅದಾಲತ್ ಜೂ.20ರಂದು

Published on

ಹಾವೇರಿ: ಇಲ್ಲಿನ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಜೂ.20ರಂದು ಬೆಳಗ್ಗೆ 11.30ಕ್ಕೆ ಅಂಚೆ ಇಲಾಖೆಯ ಪಿಂಚಣಿದಾರರಿಗೆ ಪಿಂಚಣಿ ಅದಾಲತ್ ಆಯೋಜಿಸಲಾಗಿದೆ.

ಅಂಚೆ ಸೇವೆಯಿಂದ ನಿವೃತ್ತರಾದ ನೌಕರರ ಪಿಂಚಣಿ ಮತ್ತು ಇತರೆ ನಿವೃತ್ತ ಸೌಲಭ್ಯಗಳ ಹಾಗೂ ಕುಟುಂಬ ಪಿಂಚಣಿದಾರರ ಅಹವಾಲುಗಳೇನಾದರೂ ಇದ್ದಲ್ಲಿ ಅವುಗಳನ್ನು ಅದಾಲತ್‌ನಲ್ಲಿ ಆಲಿಸಲಾಗುವುದು. ಗ್ರಾಮೀಣ ಅಂಚೆ ಸೇವಕರು ಮತ್ತಿತರರಿಗೆ ಈ ಅದಾಲತ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಅದಾಲತ್‌ನಲ್ಲಿ ತೀರ್ಮಾನಿಸುವ ಅಹವಾಲುಗಳಿದ್ದಲ್ಲಿ ಲಿಖಿತವಾಗಿ ಜೂ.19ರಂದು ಅಂಚೆ ಅಧೀಕ್ಷಕರು, ಹಾವೇರಿ ಅಂಚೆ ವಿಭಾಗ, ಹಾವೇರಿ-581110 ಈ ವಿಳಾಸಕ್ಕೆ ಸಲ್ಲಿಸಬೇಕು ಎಂದು ಹಾವೇರಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net