ಹಾವೇರಿ: ಕೇಂದ್ರ ಸರ್ಕಾರ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ‘ಹರ್ ಘರ್ ತಿರಂಘಾ’ ಅಭಿಯಾನ ಹಮ್ಮಿಕೊಂಡಿದೆ. ಇದರ ಅಂಗವಾಗಿ ಅಂಚೆ ಕಚೇರಿಗಳಲ್ಲಿ 25 ರೂ.ಗೆ ಒಂದು ತ್ರಿವರ್ಣ ಧ್ವಜ ಮಾರಾಟಕ್ಕೆ ಲಭ್ಯವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಂಚೆ ಇಲಾಖೆಯ ಹಾವೇರಿ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.