ಹಾವೇರಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಪರಿಸರ ರಕ್ಷಣೆ ಉದ್ದೇಶದಿಂದ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಗಣೇಶನ ಮೂರ್ತಿಗಳನ್ನು ಪಟ್ಟಣದ ಹತ್ತಿರವಿರುವ ಕೊಳ, ಕೆರೆ, ಬಾವಿ ಮತ್ತು ನದಿ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಯಂತ್ರಿಸಲು ತಾತ್ಕಾಲಿಕವಾಗಿ ಸಂಚಾರಿ ಗಣೇಶ ಮೂರ್ತಿ ವಿಸರ್ಜನಾ ವಾಹನವನ್ನು ಹಾವೇರಿ ನಗರದ ಆಯ್ದ ಪ್ರದೇಶಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ ತಿಳಿಸಿದ್ದಾರೆ.
ಗಣೇಶನ ಮೂರ್ತಿಗಳನ್ನು ವಿವಿಧ ಜಲಮೂಲಗಳಲ್ಲಿ ವಿಸರ್ಜಿಸಿ ಅಲ್ಲಿನ ಪರಿಸರ ಹಾಗೂ ಜಲಮೂಲಗಳನ್ನು ಕಲುಷಿತಗೊಳ್ಳುವುದನ್ನು ನಿಯಂತ್ರಿಸಲು ಸಂಚಾರಿ ಗಣೇಶ ಮೂರ್ತಿ ವಿಸರ್ಜನಾ ವಾಹನದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಗಣೇಶನ ಮೂರ್ತಿಗಳನ್ನು ಮಂಡಳಿಯ ಸಂಚಾರಿ ವಾಹನದ ಉಪಯೋಗ ಪಡೆದು ಅದರಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜಿಸಿ ಪರಿಸರ ಮಾಲಿನ್ಯ ತಡೆಗಟ್ಟಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಸಂಚಾರಿ ಗಣೇಶ ಮೂರ್ತಿ ವಿಸರ್ಜನಾ ವಾಹನದ ಮಾರ್ಗದ ವಿವರ: ಪಿ.ಡಬ್ಲ್ಯೂ.ಡಿ. ಕ್ವಾರ್ಟರ್ಸ್ಸ್ (ಎಮ್. ಜಿ. ಬ್ಯಾಂಕ್ ಹತ್ತಿರ) ಆ.31ರಂದು ಸಂಜೆ 6ರಿಂದ 8.30ರ ರವರೆಗೆ. ಪುರದ ಓಣಿ ಮತ್ತು ಏಲಕ್ಕಿ ಓಣಿ (ಜೈನ ದೇವಸ್ಥಾನದ ಹತ್ತಿರ) ರಾತ್ರಿ 8.45ರಿಂದ 10ರವರೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.