ಸಾರಿಗೆ ಬಸ್‌ನಲ್ಲಿ 4.80 ಲಕ್ಷ ರೂ. ಪತ್ತೆ

6 HVR 9
Published on

ಹಾವೇರಿ: ನಗರದ ಆರ್‌ಟಿಒ ಕಚೇರಿ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಸವಣೂರಿನಿಂದ ಹಾವೇರಿಗೆ ಬರುತ್ತಿದ್ದ ಬಸ್‌ನಲ್ಲಿ ದಾಖಲೆ ಇಲ್ಲದ 4.80 ಲಕ್ಷ ರೂ. ಪತ್ತೆಯಾಗಿದೆ.
ನಾಗರಾಜ ಮಡಿವಾಳರ ಎಂಬ 30 ವರ್ಷದ ಯುವಕ ಕೆಎ 42 ಎಫ್ 865 ಬಸ್ ಮೂಲಕ ಹಣ ಸಾಗಿಸುತ್ತಿದ್ದ. ಹಾವೇರಿಗೆ ಬರುತ್ತಿದ್ದ ಬಸ್‌ಅನ್ನು ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಡೆದು ತಪಾಸಣೆ ಮಾಡುವಾಗ ಹಣ ಪತ್ತೆಯಾಗಿದೆ.
ಹಣ ವಶಕ್ಕೆ ಪಡೆದಿರುವ ಪೊಲೀಸರು ನಾಗರಾಜನ ಮಾಹಿತಿ ಕಲೆ ಹಾಕುತ್ತಿದ್ದಾರೆ. ದಾವಣಗೆರೆಯಲ್ಲಿ ತೆಂಗಿನಕಾಯಿ ವ್ಯಾಪಾರ ಮಾಡಿಕೊಂಡಿರುವ ನಾಗರಾಜ ಹುಬ್ಬಳ್ಳಿಯಲ್ಲಿ ಹಣ ಪಡೆದು ದಾವಣಗೆರೆಗೆ ಹೊರಟಿದ್ದ ಎನ್ನಲಾಗಿದೆ. ಈ ಬಗ್ಗೆ ಶಹರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net