ಪೊಲೀಸ್, ಮಾಧ್ಯಮ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ; ಎಸ್‌ಪಿ ಅಂಶುಕುಮಾರ ಅರ್ಧಶತಕದ ನೆರವಿನಿಂದ ಆರಕ್ಷಕರಿಗೆ ಜಯ

28 HVR 8 B
Published on

ಹಾವೇರಿ: ಇಲ್ಲಿನ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಪೊಲೀಸ್ ಮತ್ತು ಮಾಧ್ಯಮ ತಂಡದ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಜರುಗಿತು. ರೋಚಕವಾಗಿದ್ದ ಪಂದ್ಯದಲ್ಲಿ ಪೊಲೀಸ್ ತಂಡ ಜಯ ಸಾಧಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಎಸ್‌ಪಿ ಅಂಶುಕುಮಾರ ನೇತೃತ್ವದ ಪೊಲೀಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಮೊದಲು ಕ್ರೀಡಾಂಗಣಕ್ಕೆ ಇಳಿದರು. ನಿಗಧಿತ ಹತ್ತು ಓವರ್‌ಗಳ ಪಂದ್ಯದಲ್ಲಿ ಆರಂಭಿಕ ಬ್ಯಾಟ್‌ಮನ್ ಆಗಿ ಅಂಗಳಕ್ಕೆ ಇಳಿದ ಎಸ್‌ಪಿ ಅಂಶುಕುಮಾರ ಅಜೇಯವಾಗಿ 53 ರನ್‌ಗಳ ಕೊಡುಗೆ ನೀಡಿದರು. ಬೌಲಿಂಗ್ ವಿಭಾಗದಲ್ಲೂ ಎರಡು ಪ್ರಮುಖ ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನ ರೂವಾರಿಗಳಾಗಿ ಮ್ಯಾನ್ ಆಫ್ ದಿ ಮ್ಯಾಚ್ ಎನಿಸಿಕೊಂಡರು.

10 ಓವರ್‌ಗಳಲ್ಲಿ ಪೊಲೀಸ್ ತಂಡ 117 ರನ್ ಗಳಿಸಿ ಪತ್ರಕರ್ತರ ತಂಡಕ್ಕೆ 118ರನ್‌ಗಳ ಗುರಿ ನೀಡಿತು. ಮಾದ್ಯಮ ತಂಡ 10 ಓವರ್‌ಗಳಲ್ಲಿ ಕೇವಲ 66 ರನ್‌ಗಳಿಸಿ ಪರಾಭವಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net