

ಹಾವೇರಿ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿಕೊಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಹಾವೇರಿ ಶಹರ ಠಾಣೆ ಪೊಲೀಸರು ಶುಕ್ರವಾರ ಭೇದಿಸಿದ್ದಾರೆ. ಮೂವರು ಆರೋಪಿತರನ್ನು ಬಂಧಿಸಿ ಅವರಿಂದ 2.96ಲಕ್ಷ ರೂ. ಮೌಲ್ಯದ 11 ಕೆಜಿ 843 ಗ್ರಾಂ ಗಾಂಜಾ, ಮೊಬೈಲ್, 900 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಸವಣೂರಿನ ಲಕ್ಸರ್ ಬಜಾರ್ ನಿವಾಸಿ ಗುಲಾಮರಸೂಲಖಾನ್ ಹಸನಖಾನ್ ಖಾಂಜಾದ, ಮಂಗಳವಾರಪೇಟೆ ನಿವಾಸಿ ಮಲ್ಲಿಕರೆಹಾನ್ ರಿಯಾಜ್ ಅಹ್ಮದ್‌ಬಕ್ರಿಯಾವಾಲೆ ಹಾಗೂ ಪುರಖಾನ್ ಬಾಬಾಜಾನ್ ಪಟವೆಗಾರ ಬಂಧಿತರು.
ಹಾವೇರಿ ಸಮೀಪದ ನಾಗೇಂದ್ರನಮಟ್ಟಿಯಿಂದ ಶಾಂತಿನಗರಕ್ಕೆ ಹೋಗುವ ರಸ್ತೆ ಬದಿಯಲ್ಲಿ ಆರೋಪಿತರು ನಿಷೇಧಿತ ಮಾದಕ ವಸ್ತು ಸಂಗ್ರಹಿಸಿ ಇಟ್ಟುಕೊಂಡಿದ್ದರು. ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಕುರಿತು ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಎಎಸ್‌ಪಿ ಸಿ.ಗೋಪಾಲ, ಡಿವೈಎಸ್‌ಪಿ ಎಂ.ಎಸ್.ಪಾಟೀಲ ಮಾರ್ಗದರ್ಶನದಲ್ಲಿ ಶಹರ ಸಿಪಿಐ ಮೋತಿಲಾಲ ಪವಾರ, ತನಿಖಾಧಿಕಾರಿ ಎಂ.ಎಸ್.ವನಹಳ್ಳಿ, ಸಿಬ್ಬಂದಿ ಎಂ.ಕಿ.ಎರೇಶಿಮಿ, ಕುಬೇರಪ್ಪ ಲಮಾಣಿ, ಮುತ್ತಪ್ಪ ಲಮಾಣಿ, ಶಂಕರಪ್ಪ ಲಮಾಣಿ, ಚನ್ನಬಸಪ್ಪ ಆರ್.ಬಿ., ನೀಲಕಂಠ ಲಿಂಗರಾಜು, ಚಂದ್ರಕಾಂತ ಎಲ್.ಆರ್., ಬಸವರಾಜ ಎನ್.ಸಿ., ಮಾಲತೇಶ ಕಬ್ಬೂರು, ಮಾರುತಿ ಹಾಲಭಾವಿ, ಸತೀಶ ಮಾರಕಟ್ಟಿ ತಂಡ ಕಾರ್ಯಾಚರಣೆ ನಡೆಸಿದೆ.