ಶ್ರದ್ಧೆಯ ಕಾಯಕ ಜೀವಿ ಪತ್ರಿಕಾ ವಿತರಕ

hbl patrika
Published on

ಹಾವೇರಿ: ದಿನಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವುದು ಬಿಡುವೇ ಇಲ್ಲದ ಕೆಲಸ. ಈ ನಿಟ್ಟಿನಲ್ಲಿ ನಿತ್ಯವೂ ನಸುಕಿನಲ್ಲಿಯೇ ಕಾಯಕ ಆರಂಭಿಸುತ್ತಾರೆ ಪತ್ರಿಕಾ ವಿತರಕರು, ಏಜೆಂಟರು. ಬೆಳಗಾಗುವುದರೊಳಗೆ ಓದುಗರ ಮನೆ ಬಾಗಿಲಿಗೆ ಪತ್ರಿಕೆ ತಲುಪಿಸುತ್ತಾರೆ. ಮಳೆಯೇ ಬರಲಿ, ಚಳಿಯೇ ಇರಲಿ… ತಮ್ಮ ಕಾಯಕವನ್ನು ಅತ್ಯಂತ ಶ್ರದ್ಧೆಯಿಂದ ನಡೆಸುತ್ತಾರೆ. ಇಂತಹ ಕಷ್ಟಜೀವಿಗಳನ್ನು ಸ್ಮರಿಸುವ ದಿನವೇ ಸೆ. 4ರ ಪತ್ರಿಕಾ ವಿತರಕರ ದಿನ. ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ನೋವು-ನಲಿವಿನ ಕೆಲ ಅನಿಸಿಕೆಗಳು ಇಲ್ಲಿವೆ.

ಪತ್ರಿಕೆಗಳನ್ನು ನಿತ್ಯವೂ ಮನೆ ಮನೆಗೆ ತಲುಪಿಸುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ. ಮಳೆ, ಚಳಿ ಲೆಕ್ಕಿಸದೆ ನಿತ್ಯವೂ ಸೈಕಲ್ ಮೇಲೆ ಬಂದು ಮನೆಗೆ ದಿನಪತ್ರಿಕೆ ತಲುಪಿಸುತ್ತಾರೆ. ಆದರೆ, ಅವರ ಬದುಕಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಆದ್ದರಿಂದ ಸರ್ಕಾರದಿಂದ ಅವರಿಗೆ ಕಾರ್ಮಿಕರಿಗೆ ನೀಡಿದಂತೆ ವಿಶೇಷ ಸೌಲಭ್ಯ ಕಲ್ಪಿಸಿಕೊಡಬೇಕು.ಗೀತಾ ಕಾಕೋಳ ಗೃಹಿಣಿ, ರಾಣೆಬೆನ್ನೂರ ದೇಶದಲ್ಲಿ ಸ್ವಾತಂತ್ರೃಪೂರ್ವದಿಂದಲೂ ಪತ್ರಿಕೆಗಳ ವಿತರಣೆ ಮಾಡುವವರು ಮಹತ್ವದ ಪಾತ್ರ ವಹಿಸಿದ್ದಾರೆ. ಇಂದು ದೇಶದಲ್ಲಿ ಎಷ್ಟೇ ಬದಲಾಣೆಯಾದರೂ ಪತ್ರಿಕೆ ವಿತರಣೆ ಮಾಡುವವರ ಕಾರ್ಯ ಬದಲಾಗಿಲ್ಲ. ಅವರ ಸೇವೆಗೆ ಪ್ರತಿಯೊಬ್ಬರೂ ಗೌರವ ಸೂಚಿಸಬೇಕು. ಸಮಾಜದಲ್ಲಾಗುವ ಎಲ್ಲ ರೀತಿಯ ಸುದ್ದಿಗಳನ್ನು ಮನೆ ಮನೆಗೆ ತಲುಪಿಸುವ ಪತ್ರಿಕಾ ವಿತರಕರ ಸೇವೆ ಅನನ್ಯವಾದದ್ದು.ಮಲ್ಲಣ್ಣ ಅಂಗಡಿ, ನಗರಸಭೆ ಸದಸ್ಯ ರಾಣೆಬೆನ್ನೂರ ಪತ್ರಿಕಾ ವಿತರಕರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಒಳಪಡುವಂತೆ ವಿಮಾ ಸೌಲಭ್ಯ ಕಲ್ಪಿಸಬೇಕು. ಸರ್ಕಾರದಿಂದ ಲಭ್ಯವಿರುವ ವಿವಿಧ ಯೋಜನೆಗಳನ್ನು ಪತ್ರಿಕಾ ವಿತರಕರಿಗೆ ದೊರಕಿಸಬೇಕು. ನಮ್ಮ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳು-ಸಹಾಯಧನ ದೊರಕಬೇಕು. ಮುಖ್ಯವಾಗಿ ಸಮಾಜದಲ್ಲಿ ಪತ್ರಿಕಾ ವಿತರಕರನ್ನೂ ಗೌರವದಿಂದ ಕಾಣುವಂತಾಗಬೇಕು.ಮಂಜುನಾಥ ತಳವಾರ, ವಿಜಯವಾಣಿ ವಿತರಕ ಹಾನಗಲ್ಲ ಕಳೆದ ಹತ್ತು ವರ್ಷಗಳಿಂದ ಪತ್ರಿಕೆ ವಿತರಿಸುವ ಕಾಯಕ ಮಾಡುತ್ತಿದ್ದು, ಸರ್ಕಾರ ಎಲ್ಲ ವರ್ಗದ ಜನರು, ಸಣ್ಣಪುಟ್ಟ ವೃತ್ತಿಯವರಿಗೆ ಪ್ಯಾಕೇಜ್ ಘೋಷಿಸಿದೆ. ಮಳೆ, ಚಳಿ, ರೋಗರುಜಿನ ಲೆಕ್ಕಿಸದೆ ಮನೆಮನೆಗೂ ತೆರಳಿ ರಜೆರಹಿತ ಕೆಲಸ ಮಾಡುತ್ತಿದ್ದೇವೆ. ಈ ಬಾರಿ ಸರ್ಕಾರ ನಮ್ಮನ್ನು ಕಾರ್ಮಿಕ ಇಲಾಖೆಗೆ ಸೇರಿಸಿ ವಿಶೇಷ ಸೌಲಭ್ಯ ಒದಗಿಸಬೇಕು. ನಾಲ್ಕು ವರ್ಷದಿಂದ ರಾಜ್ಯಮಟ್ಟದಲ್ಲಿ ಸಂಘಟನೆ ಮಾಡುತ್ತ ನಮ್ಮ ಬೇಡಿಕೆ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಿತರಕರ ದಿನಾಚರಣೆಯಂದಾದರೂ ನಮಗೆ ನ್ಯಾಯ ಸಿಗಲಿ.ಕಿರಣ ದೇಸೂರು, ವಿತರಕ ಬ್ಯಾಡಗಿ ಪತ್ರಿಕೆಗಳ ಜೀವಾಳವಾಗಿರುವ ಪತ್ರಿಕೆ ವಿತರಕರ ಕುರಿತು ಸರ್ಕಾರ ಉನ್ನತ ಚಿಂತನೆ ಕೈಗೊಳ್ಳುವುದು ಅವಶ್ಯವಾಗಿದೆ. ಪತ್ರಿಕೆ ವಿತರಕರ ಮಕ್ಕಳ ಶಿಕ್ಷಣ, ಕುಟುಂಬದವರ ಆರೋಗ್ಯಕ್ಕೆ ವಿಶೇಷ ಸೌಲಭ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ನೀಡಲು ಒತ್ತಾಯಿಸಿ ಸೆ. 4ರಂದು ತುಮಕೂರಿನಲ್ಲಿ ಆಯೋಜಿಸಿರುವ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ 3ನೇ ಸಮಾವೇಶದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ.ಶ್ರೀದೇವಿ ಹಿರೇಮಠ, ಸವಣೂರ ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷೆ ಮಳೆ, ಚಳಿ ಲೆಕ್ಕಿಸದೇ ನಸುಕಿನ ಜಾವ ನಿತ್ಯ ಕಾರ್ಯ ಕೈಗೊಳ್ಳುವ ನಿಜವಾದ ಕಾರ್ಮಿಕ ಎಂದರೆ ಪತ್ರಿಕಾ ವಿತರಕ ಮಾತ್ರ. ವರ್ಷವಿಡೀ ಮಾಡುವ ಕೆಲಸಕ್ಕೆ ಪಡೆಯುವ ವೇತನ ಮಾತ್ರ ಅಲ್ಪ. ಅಭಿಮಾನಕ್ಕೆ ಪತ್ರಿಕೆ ವಿತರಣೆ ಮಾಡುತ್ತಿದ್ದೇವೆ ಎಂದು ಸಮಾಧಾನ ಪಟ್ಟುಕೊಳ್ಳುವಂತಾಗಿದೆ ಬದುಕು. ಸರ್ಕಾರ ಪತ್ರಿಕಾ ವಿತರಕರ ಬಗ್ಗೆ ಅನುಕಂಪ ತೋರಲಿ.ಮಂಜುನಾಥ ಪಿಳ್ಳಿ, ಸವಣೂರ ತಾಲೂಕು ಪತ್ರಿಕಾ ವಿತರಕರ ಸಂಘದ ಕಾರ್ಯದರ್ಶಿ ಹಲವು ಅಡ್ಡಿ, ಆತಂಕಗಳ ನಡುವೆ ತನ್ನ ಸುರಕ್ಷತೆ ಲೆಕ್ಕಿಸದೆ ಓದುಗರಿಗೆ ದಿನಪತ್ರಿಕೆಗಳನ್ನು ತಲುಪಿಸುವ ಕಾರ್ಯವನ್ನು ಪತ್ರಿಕಾ ವಿತರಕರು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಮಳೆ ಇರಲಿ, ಚಳಿ ಇರಲಿ, ಅನಾರೋಗ್ಯದಿಂದ ನರಳುತ್ತಿರಲಿ, ಯಾವುದಕ್ಕೂ ಜಗ್ಗದೇ ಪತ್ರಿಕೆಗಳನ್ನು ನಿತ್ಯ ಓದುಗರ ಮನೆಗೆ ಮುಟ್ಟಿಸುತ್ತೇವೆ. ಪತ್ರಿಕಾ ವಿತರಕರಿಗೆ ಕಾರ್ಮಿಕ ಇಲಾಖೆಯ ಸೌಲಭ್ಯಗಳನ್ನು ನೀಡಬೇಕು. ಜತೆಗೆ ಸುರಕ್ಷತೆ ದೃಷ್ಟಿಯಿಂದ ಜೀವ ವಿಮೆ ಮತ್ತು ಆರೋಗ್ಯ ಸೇವೆ ಒದಗಿಸಲು ಸರ್ಕಾರ ಮುಂದಾಗಬೇಕು. ಪತ್ರಿಕಾ ವಿತರಕರ ಸಹಾಯಕ್ಕೆ ಸರ್ಕಾರ ಮುಂದೆ ಬರಬೇಕು. ಮಳೆ, ಚಳಿ, ಬಿಸಿಲು ಏನೆ ಇದ್ದರೂ ವರ್ಷಪೂರ್ತಿ ಯಾವುದನ್ನೂ ಲೆಕ್ಕಿಸದೇ ಧೈರ್ಯದಿಂದ ಮನೆ ಬಾಗಿಲಿಗೆ ಪತ್ರಿಕೆ ವಿತರಿಸುತ್ತೇವೆ. ವಿತರಕರಿಗೆ ಆರೋಗ್ಯ ಕಿಟ್, ಜೀವ ವಿಮೆ ಜತೆಗೆ ವಿವಿಧ ವೃತ್ತಿಯಲ್ಲಿರುವವರಿಗೆ ಸಹಾಯ ಧನ ನೀಡಿದಂತೆ ವಿತರಕರಿಗೂ ಸಹಾಯ ಧನ ವಿತರಿಸಬೇಕು.ಸುಶೀಲ್‌ಕುಮಾರ ಹಿರೇಮಠಬಂಕಾಪುರ ವಿಜಯವಾಣಿ ಪತ್ರಿಕೆ ವಿತರಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net