

ಹಾವೇರಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ 89 ಸೇವೆಗಳನ್ನು ಗ್ರಾಮೀಣ ಜನರು ಕುಳಿತಲ್ಲೇ ಪಡೆಯಲು ಹಾಗೂ ತಮ್ಮ ಕುಂದುಕೊರತೆಗಳನ್ನು ದಾಖಲಿಸಲು ಅನುಕೂಲವಾಗುವಂತೆ ಆರಂಭಿಸಿರುವ ಪಂಚಮಿತ್ರ ಪೋರ್ಟಲ್ ಅನ್ನು ನಗರದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಿದರು.
ಪಂಚಾಯತ್ ರಾಜ್ ಇಲಾಖೆಯಡಿ ಬರುವ ಎಲ್ಲ ಗ್ರಾಮ ಪಂಚಾಯ್ತಿಗಳ ಮಾಹಿತಿ ಹಾಗೂ ಸಲ್ಲಿಸಿದ ಅರ್ಜಿಯ ಸ್ಥಿತಿಗತಿ ಪರಿಶೀಲಿಸಲು ಪಂಚಮಿತ್ರ ಪೋರ್ಟಲ್ ಸಹಕಾರಿಯಾಗಿದೆ. ಕುಡಿಯುವ ನೀರು, ಬೀದಿದೀಪ, ಕಟ್ಟಡ ನಿರ್ಮಾಣ ಲೈಸೆನ್ಸ್ ಹೊಸ ನೀರು ಸರಬರಾಜು ಸಂಪರ್ಕ, ಕಡಿತ, ಗ್ರಾಮ ನೈರ್ಮಲ್ಯದ ನಿರ್ವಹಣೆ, ಸ್ವಾಧೀನ ಪ್ರಮಾಣಪತ್ರ ನಮೂನೆ-99/11 ಹಾಗೂ ನಮೂನೆ-11ಬಿ ಗ್ರಾಮ ಪಂಚಾಯ್ತಿಗಳಿಗೆ ಸಂಬಂಧಿಸಿದಂತೆ ಇನ್ನಿತರ 17 ಸೇವೆಗಳು ಇತರೆ ಇಲಾಖೆಗೆ ಸಂಬಂಧಿಸಿದ 72 ಸೇವೆಗಳು ಈ ಪೋರ್ಟಲ್‌ನಲ್ಲಿ ಲಭ್ಯವಿರುತ್ತವೆ. http://panchatantra.kar.nic.in/panchamitra ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಪಂಚಮಿತ್ರ ವೆಬ್‌ಸೈಟ್ ತೆರಯಲಿದೆ.
ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ಇತರರಿದ್ದರು.