ಪ್ರೀತ್ಸೆ ಅಂತಾ ಬೆಂಬಿದ್ದ ಪಾಗಲ್ ಪ್ರೇಮಿ !

Published on

ಹಾವೇರಿ: ಯುವತಿಯೊಬ್ಬಳ ಹಿಂದೆ ಬಿದ್ದ ಪಾಗಲ್ ಪ್ರೇಮಿಯೊಬ್ಬ ನಗರದಲ್ಲಿ ಯುವತಿ ತಂಗಿದ್ದ ಮನೆಗೆ ತೆರಳಿ ಪ್ರೀತ್ಸೆ ಪ್ರೀತ್ಸೆ ಅಂತಾ ಕೈಮುಗಿದು ಗೋಗರೆಯುವ ವಿಡಿಯೋ ವೈರಲ್ ಆಗಿದೆ.

ಪ್ರಮೋದ ಎಂಬ ಯುವಕ ಯುವತಿಯನ್ನು ಪ್ರೀತಿಸಿದ್ದ. ಯುವತಿಯೂ ಈ ಮೊದಲು ಪ್ರೀತಿಸಿದ್ದು, ಈಗ ನಿರಾಕರಿಸಿದ್ದಳು. ಹಾಗಾಗಿ, ಯುವತಿ ತಂಗಿದ್ದ ಬಾಡಿಗೆ ನಿವಾಸದ ಬಳಿ ತೆರಳಿ ಪ್ರೀತ್ಸೆ, ಪ್ರೀತ್ಸೆ ಎಂದು ರಂಪಾಟ ಮಾಡಿದ್ದ. ಕೈಮುಗಿಯುವೆ, ಕಾಲಿಗೆ ಬೀಳುವೆ ಪ್ರೀತ್ಸೆ ಅಂತಾ ಬೇಡಿಕೊಂಡಿದ್ದ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಹಿನ್ನೆಲೆಯಲ್ಲಿ ಶಹರ ಠಾಣೆ ಪೊಲೀಸರು ಯುವಕ- ಯುವತಿಯನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net