ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿ

Published on

ಹಾವೇರಿ: ಮತದಾರರ ನೋಂದಣಿ ನಿಯಮಗಳು 1960ರ 31(4)ನೇ ನಿಯಮದ ಅನುಸಾರ ಪಶ್ಚಿಮ ಪದವೀಧರರ ಮತಕ್ಷೇತದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಕಾರ್ಯ ಆರಂಭವಾಗಿದೆ.

ಅರ್ಹರು ನಿಯಮಗಳ ಅನ್ವಯ ನಮೂನೆ-18ರಲ್ಲಿ ಭರ್ತಿ ಮಾಡಿ ಅರ್ಜಿಯನ್ನು ಮತದಾರರ ನೋಂದಣಾಧಿಕಾರಿಗಳ, ಸಂಬಂಧಪಟ್ಟ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಅಥವಾ ನಿಯೋಜಿತ ಅಧಿಕಾರಿಗಳ ಕಚೇರಿಗೆ ನ.6ರ ಒಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್ www.ceokarnataka.kar.nic.in ನಲ್ಲಿ ಪರಿಶೀಲಿಸಬಹುದು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರ ಮತದಾರರ ನೋಂದಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net